ಬೆತ್ತಲೆ ಫೋಟೊ ಕಳುಹಿಸುವಂತೆ ಬ್ಲಾಕ್ ಮೇಲ್, ಯುವತಿ ಆತ್ಮಹತ್ಯೆ ಕೇಸ್, ಆರೋಪಿ ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | INSTAGRAM| 17 ಏಪ್ರಿಲ್ 2022

ಇನ್​ಸ್ಟಾಗ್ರಾಮ್ ಖಾತೆ ಮೂಲಕ ಬ್ಲಾಕ್ ಮೇಲ್ ಮಾಡಿ ಯುವತಿ ಸಾವಿಗೆ ಕಾರಣನಾದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ. ಬೆತ್ತಲೆ ಫೋಟೊ ಕಳುಹಿಸುವಂತೆ ಬೆದರಿಕೆ ಒಡ್ಡುತ್ತಿದ್ದರಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು.

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಪುನೀತ್ ಬಂಧಿತ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಯುವತಿಗೆ ಪುನೀತ್ ಬೆದರಿಕೆ ಒಡ್ಡಿದ್ದ ಆರೋಪವಿದೆ. ಇದರಿಂದ ಮನನೊಂದ ಏಪ್ರಿಲ್ 6ರಂದು ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಏನಿದು ಪ್ರಕರಣ?

ಪದವಿ ಓದುತ್ತಿದ್ದ ಯುವತಿ INSTAGRAM ಖಾತೆ ಹೊಂದಿದ್ದಳು. ಆಕೆಯ INSTAGRAMಗೆ dlatico _ph ಎಂಬ ಖಾತೆಯ ಮೂಲಕ ವ್ಯಕ್ತಿಯೊಬ್ಬ ಪದೇ ಪದೆ ಕರೆ ಮಾಡುತ್ತಿದ್ದ. ‘ನಿನ್ನ ಬೆತ್ತಲೆ ಫೋಟೊ ಕಳುಹಿಸು’ ಎಂದು ಒತ್ತಾಯಿಸುತ್ತಿದ್ದ. ಒಂದು ವೇಳೆ ಫೋಟೊ ಕಳುಹಿಸದಿದ್ದರೆ ತನ್ನ ಬಳಿ ಇರುವ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಬೇಕಾಗುತ್ತದೆ’ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕುಟುಂಬದ ಮುಂದೆ ನೋವು ಹೇಳಿದಳು

ಅಪರಿಚಿತನ ಬೆದರಿಕೆ ಹೆಚ್ಚಾದ ಹಿನ್ನೆಲೆ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಧೈರ್ಯ ಹೇಳಿದ ಪೋಷಕರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಶಿರಾಳಕೊಪ್ಪ ಠಾಣೆಗೆ ಹೋಗಿ ದೂರು ನೀಡಲು ಸಿದ್ದವಾಗಿ ಬರುವಂತೆ ತಂದೆ ಮಗಳಿಗೆ ತಿಳಿಸಿದ್ದಾರೆ. ಕೊಠಡಿಯೊಳಗೆ ಹೋದ ಯುವತಿ ಬಾಗಿಲು ಹಾಕಿಕೊಂಡಿದ್ದಾಳೆ. ಬಹು ಹೊತ್ತು ಹೊರಗೆ ಬಾರದ ಹಿನ್ನೆಲೆ ಪೋಷಕರು ಬಾಗಿಲು ತಟ್ಟಿದ್ದಾರೆ.

ನೇಣು ಬಿಗಿದುಕೊಂಡ ಯುವತಿ

ಕೊಠಡಿಯೊಳಗೆ ಹೋಗಿ ನೋಡಿದಾಗ ಯುವತಿಯು ಮರದ ಗಾಳಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಳು. ಕೂಡಲೆ ಕುಣಿಕೆಯಿಂದ ಬಿಡಿಸಿ, ಆಕೆಯನ್ನು ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಶೀಲನೆ ನಡೆಸಿದ ವೈದ್ಯರು ಮಗಳು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಏಪ್ರಿಲ್ 6ರಂದು ಘಟನೆ ಸಂಭವಿಸಿತ್ತು.

Puneeth Arrested for Alleged Blackmail

ಅಪರಿಚಿತನ ವಿರುದ್ಧ ದೂರು ಕೊಟ್ಟಿದ್ದರು

INSTAGRAMನಲ್ಲಿ ಬೆದರಿಕೆ ಒಡ್ಡಿದ ವ್ಯಕ್ತಿಯೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ದೂರು ನೀಡಿದ್ದರು. dlatico _ph ಖಾತೆಯನ್ನು ನಿರ್ವಹಿಸುತ್ತಿದ್ದಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಪುನೀತ್ ಎಂಬಾತನನ್ನು ಬಂಧಿಸಿದ್ದಾರೆ.

ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಹೆಚ್ಚಿನ ತನಿಖೆ ನೆಸುತ್ತಿದ್ದಾರೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 17, 2022

Leave a Comment