ಸರ್ಜಿಕಲ್ ದಾಳಿ ಮಾಡಿದ್ದು ಮೋದಿಯಲ್ಲ, ಯೋಧರು ಅಂತಾರೆ, ಐಟಿ ದಾಳಿಯಾದರೆ ಯಾಕೆ ಮೋದಿ ವಿರುದ್ಧ ಆರೋಪ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019

ಕುಚೇಷ್ಟೆ, ಅಹಂಕಾರ, ಸ್ವಾರ್ಥ, ಸುಳ್ಳು ಮುಂತಾದ ಕೆಟ್ಟ ಗುಣಗಳೇ ಮಧು ಬಂಗಾರಪ್ಪ ಅವರ ಸೋಲಿಗೆ ಕಾರಣವಾಗುತ್ತದೆ ಅಂತಾ ಶಾಸಕ, ಮೇ ಬೀ ಚೌಕಿದಾರ್ ಅಭಿಯಾನದ ಸಂಚಾಲಕ ಕುಮಾರ್ ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಚುನಾವಣಾ ಪ್ಯಾಕೇಜ್ ಅಭ್ಯರ್ಥಿ. ಚುನಾವಣೆ ಇದ್ದಾಗ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆ. ನಂತರ ಅವರು ಪ್ಯಾಕೇಜ್ ಫಾರಿನ್ ಟೂರ್’ಗೆ ಹೋಗುತ್ತಾರೆ. ಯಾರ ಕೈಗೂ ಸಿಗುವುದಿಲ್ಲ. ಇಂತಹ ಅಭ್ಯರ್ಥಿ ಬದಲು ದೇಶದ ಸುರಕ್ಷತೆಗೆ ಚೌಕಿದಾರನಾಗಿ ನಿಂತಿರುವ ನರೇಂದ್ರ ಮೋದಿ ಕೈ ಬಲಪಡಿಸಲು ಬಿಜೆಪಿಯನ್ನು ಬೆಂಬಲಿಸಿ ಎಂದರು.

ಸಿದ್ದರಾಮಯ್ಯ ಹೇಳಿದ್ದು ಎಲ್ಲರಿಗೂ ಗೊತ್ತಿದೆ

ಮಧು ಬಂಗಾರಪ್ಪ ಶಾಸಕರಾಗಿದ್ದಾಗ ಸೊರಬ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ನಂತರ ಸೋತಾಗಲೂ ಯಾವುದೇ ಯೋಜನೆ ಅನುಷ್ಟಾನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿದವರಲ್ಲ, ಇದನ್ನು ಆಗಿನ ಸಿಎಂ ಸಿದ್ದರಾಮಯ್ಯ ನವರೇ ಭಾಷಣದಲ್ಲಿ ಹೇಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

Madhu Bangarappa General Image

ರೈತರಿಗೆ ಸಾಗುವಳಿ ಚೀಟಿ ಕೊಡಿಸಲು ಇವರಿಂದ ಆಗಿಲ್ಲ. ಈಗ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಮನವಿ ನೀಡಿ ಜಾರಿ ಮಾಡಿಸಿದ ನೀರಾವರಿ ಯೋಜನೆಗಳನ್ನು ನಾನು ಮಾಡಿಸಿದ್ದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಐಟಿ ದಾಳಿಯಾದರೆ ಮೋದಿ ವಿರುದ್ಧ ಆರೋಪವೇಕೆ?

ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಸ್ಪೇಸ್ ಸ್ಟ್ರೈಕ್ ಮಾಡುವ ಮೂಲಕ ಭಾರತದ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿದ್ದು ಮೋದಿ. ಆದರೆ ಇದು ಮಾಡಿದ್ದು ಸೈನಿಕರು, ವಿಜ್ಞಾನಿಗಳು ಎಂದು ಹೇಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಐಟಿ ದಾಳಿ ನಡೆದಿದ್ದಕ್ಕೆ ಮಾತ್ರ ಮೋದಿ ಕಾರಣ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

ಗೋಷ್ಠಿಯಲ್ಲಿ ಡಿ.ಎಸ್.ಅರುಣ್, ಎಸ್. ಎನ್.ಚನ್ನಬಸಪ್ಪ, ಮಧುಸೂದನ್, ಕೆ.ವಿ.ಅಣ್ಣಪ್ಪ, ವಿ.ರಾಜು, ಹಿರಣಯ್ಯ, ರತ್ನಾಕರ ಶೆಣೈ ಮತ್ತಿತರರಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 30, 2019

Leave a Comment