ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | SHIRALAKOPPA | 27 ಜುಲೈ 2022
ಒಂದು ತಿಂಗಳ ಹಿಂದೆ ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ (ARREST). 16 ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಸುವ ವೇಳೆ ಬಂಧಿತರು ಬರೀ ಬೈಕ್ ಕಳ್ಳರಲ್ಲ, ಶ್ರೀಗಂಧ ಚೋರರು ಹೌದು ಎಂಬುದು ಬೆಳಕಿಗೆ ಬಂದಿದೆ.

ಶಿಕಾರಿಪುರ ತಾಲೂಕು ಸಂಡ ಗ್ರಾಮದ ಸೈಯ್ಯದ್ ಇಸ್ರಾರ್ (26), ಪುನೇದಹಳ್ಳಿಯ ರಾಕೇಶ್ (24), ಶಿಕಾರಿಪುರ ಪಟ್ಟಣದ ಗೋಪಾಲ (28) ಬಂಧಿತರು.
ಒಂದು ಬೈಕ್ ಕಳ್ಳತನ ಕೇಸ್
ಜೂನ್ 28ರಂದು ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಹೀರೋ ಹೋಂಡ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಕೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
11 ಲಕ್ಷದ ಬೈಕುಗಳು ಪತ್ತೆ
ಬಂಧಿತರ ವಿಚಾರಣೆ ನಡೆಸಿದಾಗ 11 ಲಕ್ಷ ರೂ. ಮೌಲ್ಯದ 16 ಬೈಕುಗಳು ಪತ್ತೆಯಾಗಿವೆ. ಇವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದು ಕಾರು ಕೂಡ ಪತ್ತೆಯಾಗಿದ್ದು, ಅದನ್ನು ಕೂಡ ಪೊಲೀಸರು ವಶಪಡಿಸಿಕೊಂಡುತ ತನಿಖೆ ಮುಂದುವರೆಸಿದ್ದಾರೆ.
ಬರೀ ಬೈಕ್ ಕಳ್ಳರಲ್ಲ
ತನಿಖೆ ವೇಳೆ ಈ ಮೂವರು ಆರೋಪಿಗಳು ಬರೀ ಬೈಕ್ ಕಳ್ಳರಲ್ಲ, ಶ್ರೀಗಂಧ ಚೋರರು ಕೂಡ ಹೌದು ಎಂದು ತಿಳಿದು ಬಂದಿದೆ. ಆರೋಪಿಗಳಿಂದ 5 ಕೆಜಿ 480 ಗ್ರಾಂ ಶ್ರೀಗಂಧ ತುಂಡು ಮತ್ತು ಚಕ್ಕೆಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 18,632 ರೂ. ಎಂದು ಅಂದಾಜಿಸಲಾಗಿದೆ. ಇಟ್ಟಿಗೆಹಳ್ಳಿ ಅರಣ್ಯ ಉಪ ವಲಯ ವ್ಯಾಪ್ತಿಯಲ್ಲಿ ಈ ಆರೋಪಿಗಳು ಎರಡು ಶ್ರೀಗಂಧ ಕಳವು ಪ್ರಕರಣದಲ್ಲಿ ಇವರು ಭಾಗಿಯಾಗಿದ್ದರು (ARREST) ಎಂದು ತಿಳಿದು ಬಂದಿದೆ.
ಶಿರಾಳಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ದಿಢೀರ್ ದಾಳಿ, 646 ಕೇಸ್’ನಲ್ಲಿ ದಂಡ ವಿಧಿಸಿದ ಪೊಲೀಸ್
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






