ಲಿಂಗನಮಕ್ಕಿ ಜಲಾಶಯದಲ್ಲಿ ಗಂಗೆ ಪೂಜೆ, ಒಂದು ಗೇಟ್ ಮೇಲೆತ್ತಿ ನೀರು ಹೊರಕ್ಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

ಸಾಗರ | ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಲಿಂಗನಮಕ್ಕಿ ಜಲಾಶಯ (LINGANAMAKKI DAM) ಭರ್ತಿಯಾಗುವ ಹಂತಕ್ಕೆ ತಲುಪಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಇವತ್ತು ಗಂಗೆ ಪೂಜೆ ನೆರವೇರಿಸಲಾಯಿತು. ಅಲ್ಲದೆ ಒಂದು ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರನ್ನು ಹೊರ ಬಿಡಲಾಯಿತು.

Shimoga Nanjappa Hospital

ಅಧಿಕಾರಿಗಳಿಂದ ಗಂಗೆ ಪೂಜೆ

ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ ಹಿನ್ನೆಲೆ ಇವತ್ತು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಗಂಗೆ ಪೂಜೆ ನೆರವೇರಿಸಿದರು. ಜಲಾಶಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ಶರಾವತಿ ನದಿಗೆ ಬಾಗಿನ ಅರ್ಪಿಸಲಾಯಿತು.

ಸಾಂಪ್ರದಾಯಿಕವಾಗಿ ನೀರು ಹೊರಕ್ಕೆ

ಗಂಗೆ ಪೂಜೆ ಬಳಿಕ ಲಿಂಗನಮಕ್ಕಿ ಜಲಾಶಯದ ಒಂದು ಕ್ರಸ್ಟ್ ಗೇಟನ್ನು ಮೇಲೆತ್ತಿ, ಸ್ವಲ್ಪ ಹೊತ್ತು ನೀರು ಹೊರಗೆ ಬಿಡುವ ಸಂಪ್ರದಾಯವಿದೆ. ಅದರಂತೆ ಇವತ್ತು ಜಲಾಶಯದ ಕ್ರಸ್ಟ್ ಗೇಟನ್ನು ಮೇಲೆತ್ತಿ ನೀರನ್ನು ಹೊಳೆಗೆ ಹರಿಸಲಾಯಿತು. ಈ ವೇಳೆ ವಿದ್ಯುತ್ ನಿಗಮದ ಸಿಬ್ಬಂದಿಗಳು, ಕುಟುಂಬದವರು ಸಂಭ್ರಮ ವ್ಯಕ್ತಪಡಿಸಿದರು.

ಎಷ್ಟು ಭರ್ತಿಯಾಗಿದೆ ಲಿಂಗನಮಕ್ಕಿ?

ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಪ್ರಸ್ತುತ ಜಲಾಶಯ ಶೇ.77ರಷ್ಟು ಭರ್ತಿಯಾಗಿದೆ. ಇದೆ ರೀತಿ ಮಳೆ ಮುಂದುವರೆದರೆ ಕೆಲವೇ ದಿನದಲ್ಲಿ ಲಿಂಗನಮಕ್ಕಿ ಡ್ಯಾಂ ಭರ್ತಿಯಾಗಲಿದ್ದು, ಕ್ರಸ್ಟ್ ಗೇಟ್’ಗಳ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತದೆ.

 ಇದನ್ನೂ ಓದಿ –  ಸೊರಬದ ಅಂಡಿಗೆ, ತೀರ್ಥಹಳ್ಳಿಯ ಹೊನ್ನೇತಾಳುವಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ

ಸದ್ಯ ಲಿಂಗನಮಕ್ಕಿ ಜಲಾಶಯಕ್ಕೆ (LINGANAMAKKI DAM) 50 ಸಾವಿರ ಕ್ಯೂಸೆಕ್’ಗಿಂತಲೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಇದೆ. ಈಗ 1807.70 ಅಡಿಯಷ್ಟು ನೀರು ಭರ್ತಿಯಾಗಿದೆ. ನೀರಿನ ಮಟ್ಟ 1816 ಅಡಿಗೆ ತಲುಪಿದಾಗ ಜಲಾಶಯದ ಮೂಲಕ ನೀರನ್ನು ಹೊರ ಬಿಡಲಾಗುತ್ತದೆ.

ಎರಡು ಮುನ್ನೆಚ್ಚರಿಕೆ

ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾದ ಹಿನ್ನೆಲೆ, ಜಲಾಶಯದ ವತಿಯಿಂದ ಎರಡು ಅಲರ್ಟ್ ಘೋಷಣೆ ಮಾಡಲಾಗಿದೆ. ಯಾವುದೆ ಸಂದರ್ಭ ಜಲಾಶಯದಿಂದ ನೀರ ಹೊರ ಬಿಡುವ ಸಾಧ್ಯತೆ ಇದೆ. ಹಾಗಾಗಿ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಬೇಕು. ಎತ್ತರದ ಪ್ರದೇಶದಕ್ಕೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.

 ಇದನ್ನೂ ಓದಿ –  ಶಿವಮೊಗ್ಗ ಜಿಲ್ಲೆಯಾದ್ಯಂತ ಹಳದಿ ಅಲರ್ಟ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 10, 2022

Leave a Comment