ಕೈದಿ ನೋಡಲು ಶಿವಮೊಗ್ಗ ಜೈಲಿಗೆ ಬಂದಿದ್ದ ಸ್ನೇಹಿತರು ಜೈಲುಪಾಲು, ಜೀನ್ಸ್ ಪ್ಯಾಂಟು, ಶರ್ಟ್ ಕಾರಣ

Published On : ಆಗಷ್ಟ್ 22, 2022

Published By : ನಿತಿನ್‌ ಆರ್‌.ಕೈದೊಟ್ಲು 

 SHIVAMOGGA LIVE NEWS 

ಶಿವಮೊಗ್ಗ | ಕೈದಿಗೆ ನೀಡಲು ತಂದಿದ್ದ ಬಟ್ಟೆ ಬ್ಯಾಗಿನಲ್ಲಿ ಗಾಂಜಾ (GANJA SUPPLY) ಪತ್ತೆಯಾಗಿದೆ. ಪೊಲೀಸರ (POLICE) ಕಣ್ತಪ್ಪಿಸಿ ಕೇಂದ್ರ ಕಾರಾಗೃಹದ (CENTRAL JAIL) ಒಳಗೆ ಗಾಂಜಾ ಸಾಗಣೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

Shimoga Nanjappa Hospital

ಶಿವಮೊಗ್ಗ (SHIMOGA) ಜೆ.ಪಿ.ನಗರದ ಮೊಹಮ್ಮದ್ ಮುಸಿಮಿನ್ (26), ರಾಜೀವ್ ಗಾಂಧಿ ಬಡಾವಣೆಯ ಅಬ್ದುಲ್ ಹಫೀಜ್ (24) ಮತ್ತು ಮೊಹಮ್ಮದ್ ಹುಸೇನ್ (22) ಎಂಬುವವರನ್ನು ಬಂಧಿಸಲಾಗಿದೆ.

ಜೀನ್ಸ್ ಪ್ಯಾಂಟು, ಶರ್ಟು, ಬ್ಯಾಗ್

ವಿಚಾರಣಾಧೀನ ಕೈದಿಯೊಬ್ಬನನ್ನು ಭೇಟಿಯಾಗಿ, ಆತನಿಗೆ ಬಟ್ಟೆ ನೀಡಲು ಈ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಕಾರಾಗೃಹದ ಭದ್ರತೆಗೆ ಕೆಎಸ್ಐಎಸ್ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಆರೋಪಿಗಳು ತಂದಿದ್ದ ಬಟ್ಟೆ ಬ್ಯಾಗನ್ನು ಕೆಎಸ್ಐಎಸ್ಎಫ್ (KSISF) ಸಿಬ್ಬಂದಿ ಪರಿಶೀಲಿಸಿದಾಗ ಜೈಲಿನ ಒಳಗೆ ಅಕ್ರಮವಾಗಿ ಗಾಂಜಾ (GANJA SUPPLY) ಸಾಗಣೆ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ.

ಮೂವರು ಆರೋಪಿಗಳು ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಗೆ ಜೀನ್ಸ್ ಪ್ಯಾಂಟು, ಶರ್ಟ್ ತಂದಿದ್ದರು. ಜೀನ್ಸ್ ಪ್ಯಾಂಟ್ ನ ಸೊಂಟದ ಭಾಗ ಮತ್ತು ಕಾಲಿನ ಭಾಗ, ಶರ್ಟ್’ನ ಕಾಲರ್ ಭಾಗದಲ್ಲಿ ಗಾಂಜಾವನ್ನು ತುಂಬಿದ್ದರು. ಬ್ಯಾಗ್ ಪರಿಶೀಲಿಸಿದ ಸಿಬ್ಬಂದಿಗೆ ಒಟ್ಟು 100 ಗ್ರಾಂ ಗಾಂಜಾ ಪತ್ತೆಯಾಗಿದೆ.

ಕೂಡಲೆ ಆರೋಪಿಗಳನ್ನು ಬಂಧಿಸಿದ್ದು, ಕೆಎಸ್ಐಎಸ್ಎಫ್ ಸಿಬ್ಬಂದಿ ಗಾಂಜಾ ಮತ್ತು ಬಟ್ಟೆಯನ್ನು ಜೈಲು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಜೈಲು ಅಧಿಕಾರಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ (TUNGA NAGARA) ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

Shimoga Mythri Gold offer

ಇದನ್ನೂ ಓದಿ – ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆದವರ ಮೇಲಷ್ಟೆ ಅಲ್ಲ, ಹಾಕಿದವರ ಮೇಲೂ ಬಿತ್ತು ಕೇಸ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಆಗಷ್ಟ್ 22, 2022

Leave a Comment