ಶಿವಮೊಗ್ಗದಲ್ಲಿ ಶಿಕ್ಷಕಿ ಮನೆ ಮುಂದೆ ವಾಮಾಚಾರ, ಸಿಸಿಟಿವಿ ಪರಿಶೀಲಿಸಿದಾಗ ಸೆರೆ ಸಿಕ್ಕ ಗಂಡ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA| ಶಿಕ್ಷಕಿಯೊಬ್ಬರ ಮನೆ ಮುಂದೆ ವಾಮಾಚಾರದ (BLACK MAGIC) ವಸ್ತುಗಳನ್ನು ಇರಿಸಲಾಗಿದೆ. ಇದನ್ನು ಕಂಡು ಆತಂಕಕ್ಕೀಡಾದ ಕುಟುಂಬದವರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದಾರೆ. ಶಿಕ್ಷಕಿಯ ಪತಿ ಮತ್ತು ಆತನ ಕಡೆಯವರು ವಾಮಾಚಾರದ ವಸ್ತುಗಳನ್ನು ಇಟ್ಟಿರುವುದು ಬೆಳಕಿಗೆ ಬಂದಿದೆ.

Shimoga Nanjappa Hospital

ಗೋಪಾಳದ ಮನೆಯೊಂದರ ಮುಂದೆ ಘಟನೆ ಸಂಭವಿಸಿದೆ. ವಿವಾಹ ವಿಚ್ಛೇದನಕ್ಕಾಗಿ ಶಿಕ್ಷಕಿಯ ಪತಿ ಮತ್ತು ಆತನ ಕಡೆಯುವರು ವಾಮಾಚಾರ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಾಮಾಚಾರಕ್ಕೆ ಕಾರಣವೇನು? (BLACK MAGIC)

ಶಿಕ್ಷಕಿ (ಖಾಸಗಿತನದ ಕಾರಣ ಹೆಸರು ಗೌಪ್ಯ) ಮತ್ತು ಆಕೆಯ ಪತಿ ಪ್ರತ್ಯೇಕವಾಗಿದ್ದಾರೆ. ವಿಚ್ಛೇದನ ನೀಡುವಂತೆ ಪತಿ ಕೋರ್ಟ್ ಮೊರೆ ಹೋಗಿದ್ದಾನೆ. ಆದರೆ ಶಿಕ್ಷಕಿ ವಿಚ್ಛೇದನ ನೀಡಲು ನಿರಾಕರಿಸಿದ್ದಾರೆ. ಇದೆ ಕಾರಣಕ್ಕೆ ವಾಮಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಶಿಕ್ಷಕಿಯ ಮನೆ ಬಾಗಿಲ ಮುಂದೆ ಸೆಪ್ಟೆಂಬರ್ 27ರಂದು ವಾಮಾಚಾರ ಮಾಡಿದ ವಸ್ತುಗಳು ಪತ್ತೆಯಾಗಿದ್ದವು. ಇದರಿಂದ ಕುಟುಂಬದವರು ಆತಂಕಕ್ಕೀಡಾಗಿದ್ದರು. ಮನೆ ಮುಂದೆ ಸಿಸಿಟಿವಿ ಕ್ಯಾಮಾರಾಗಳನ್ನು ಅಳವಡಿಸಿದರು. ಅಕ್ಟೋಬರ್ 24ರಂದು ಮನೆ ಮುಂದೆ ಪುನಃ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ.

ಸಿಸಿಟಿವಿಯಲ್ಲಿ ಸೆರೆ ಸಿಕ್ಕರು (BLACK MAGIC)

ಅಕ್ಟೋಬರ್ 24ರಂದು ಅಮಾವಾಸ್ಯೆಯ ದಿನ ಮನೆ ಮುಂದೆ ನಿಂಬೆ ಹಣ್ಣು, ಕುಂಕುಮ, ಕೋಳಿ ತಲೆ ಮತ್ತು ಕಾಲುಗಳನ್ನು ಇಟ್ಟು ವಾಮಾಚಾರ ಮಾಡಲಾಗಿತ್ತು. ಶಿಕ್ಷಕಿ ಕುಟುಂಬದವರು ಮನೆ ಮುಂದಿನ ಸಿಸಿಟಿವಿ ಪರಿಶೀಲಿಸಿದಾಗ ಆಕೆಯ ಪತಿ ಮತ್ತು ಆತನ ಕಡೆಯವರು ಬಂದು ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಿಕ್ಷಕಿಯ ಪತಿ ವಿರುದ್ಧ ಪ್ರಕರಣ ದಾಖಲಾಗಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ಮೊಬೈಲ್‌ಗಾಗಿ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ದಾಳಿ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 31, 2022

Leave a Comment