ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 4 DECEMBER 2022
ಶಿವಮೊಗ್ಗ : ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ನಗದು, ಮೊಬೈಲ್, ಎಲ್.ಸಿ.ಡಿ ಟಿವಿ, ವಾಚ್ ಕಳ್ಳತನ ಮಾಡಲಾಗಿದೆ. ಎಗ್ಸಾಸ್ಟ್ ಫ್ಯಾನ್ (exhaust fan) ಮುರಿದು ಮನೆಯೊಳಗೆ ನುಗ್ಗಿರುವ ಕಳ್ಳರು, ಕಳ್ಳತನ ಮಾಡಿದ ವಸ್ತುಗಳನ್ನು ಮುಂಬಾಗಿಲಿನ ಮೂಲಕವೆ ಹೊತ್ತೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಣ್ಣಾನಗರ 1ನೇ ಅಡ್ಡರಸ್ತೆಯಲ್ಲಿರುವ ಬಸವರಾಜಪ್ಪ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಬಸವರಾಜಪ್ಪ ಅವರು ಪತ್ನಿಯೊಂದಿಗೆ ಹೊನ್ನಾಳಿ ತಾಲೂಕಿನಲ್ಲಿರುವ ತಮ್ಮ ತೋಟಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ.
ಬಸವರಾಜಪ್ಪ ಅವರು ನ.28ರಂದು ತೋಟಕ್ಕೆ ತೆರಳಿದ್ದರು. ಡಿ.2ರಂದು ಮನೆಗೆ ಬಂದಾಗ, ಬಾಗಿಲು ಲಾಕ್ ಆಗಿಯೇ ಇತ್ತು. ಬೀಗ ತೆಗೆದು ಬೆಡ್ ರೂಂಗೆ ಹೋದಾಗ ವಸ್ತುಗಳು ಚೆಲ್ಲಾಪಿಲ್ಲಿ ಆಗಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ 20 ಸಾವಿರ ರೂ. ನಗದು, 10 ಸಾವಿರ ಮೌಲ್ಯದ ಸ್ಯಾಮ್ ಸಂಗ್
ಕಂಪನಿಯ ಎಲ್.ಸಿ.ಡಿ ಟಿವಿ, 600 ರೂ. ಮೌಲ್ಯದ ಟೈಟಾನ್ ವಾಚ್, ನೋಕಿಯಾ ಕೀ ಪ್ಯಾಡ್ ಮೊಬೈಲ್ ಕಳ್ಳತನವಾಗಿರುವುದು ಗೊತ್ತಾಗಿದೆ.
ಅಡುಗೆ ಮನೆಯ ಎಗ್ಸಾಸ್ಟ್ ಫ್ಯಾನ್ (exhaust fan) ಮುರಿದು ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಕಳ್ಳತನದ ಬಳಿಕ ಮತ್ತೊಂದು ಕೀ ಬಳಸಿ ಮನೆಯ ಒಳಗಿಂದ ಬಾಗಿಲು ತೆಗದು ಪುನಃ ಬೀಗ ಹಾಕಿಕೊಂಡು ಹೋಗಿದ್ದಾರೆ ಎಂದು ಬಸವರಾಜಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ALSO READ – ಶಿವಮೊಗ್ಗ ವಿಮಾನ ನಿಲ್ದಾಣ, ಒಳಗೆ ಏನೇನಿದೆ? ಹೇಗಿದೆ? ಯಾವೆಲ್ಲ ಕಟ್ಟಡ ನಿರ್ಮಿಸಲಾಗಿದೆ?

LATEST NEWS
- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

- ಸಿದ್ಲೀಪುರದಲ್ಲಿ ವೈಭವದ ಬ್ರಹ್ಮರಥೋತ್ಸವ, ಏನೇನೆಲ್ಲ ಪೂಜೆಗಳು ನೆರವೇರಿದವು?

- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

About The Editor
ನಿತಿನ್ ಆರ್.ಕೈದೊಟ್ಲು






