ಶಿವಮೊಗ್ಗದ ವಿದ್ಯಾನಗರದ ಮನೆ ಮೇಲೆ ಅರಣ್ಯ ಇಲಾಖೆ ಸಿಐಡಿ ಮೊಬೈಲ್ ಸ್ಕ್ವಾಡ್, ಪೊಲೀಸರ ದಾಳಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 MARCH 2023

SHIMOGA : ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಮೊಬೈಲ್ ಸ್ಕ್ವಾಡ್ (Mobile Squad) ಮತ್ತು ಪೊಲೀಸ್ ಸಿಬ್ಬಂದಿ ಮನೆಯೊಂದರ ಮೇಲೆ ದಾಳಿ ನಡೆಸಿ, 3.6 ಕೆ.ಜಿ ಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

Police-Jeep-With-Light-New.

ಶಿವಮೊಗ್ಗದ ವಿದ್ಯಾನಗರದ ಮನೆಯೊಂದರ ಮೇಲೆ ದಾಳಿ (Mobile Squad) ನಡೆಸಲಾಗಿದೆ. ಗಂಧದ ತುಂಡುಗಳನ್ನು ಮನೆಯಲ್ಲಿ ಇಟ್ಟಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ದಾಳಿ ನಡೆಸಿ ಶೋಧ ಕಾರ್ಯ ಮಾಡಲಾಯಿತು. ಬಚ್ಚಲಿನಲ್ಲಿದ್ದ ಪಾಳು ಬಿದ್ದಿದ್ದ ಸಿಮೆಂಟ್ ತೊಟ್ಟಿಯಲ್ಲಿ ಇದ್ದ ಹಳದಿ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ 10 ಗಂಧದ ತುಂಡುಗಳು ಪತ್ತೆಯಾಗಿವೆ.

ಇದನ್ನೂ ಓದಿ – ಮಹಿಳೆಯರೆ ಹುಷಾರ್, ಪೌಡರ್ ಗ್ಯಾಂಗ್ ವಿರುದ್ಧ ಮತ್ತೊಂದು ಕೇಸ್ ದಾಖಲು, ನಿಮ್ಮ ಮನೆ ಬಾಗಿಲಿಗು ಬರಬಹುದು ಇವರು

3.690 ಕೆ.ಜಿ ಗಂಧದ ತುಂಡುಗಳು ಪತ್ತೆಯಾಗಿವೆ. ಇದರ ಮೌಲ್ಯ 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಅಕ್ರಮವಾಗಿ ಗಂಧದ ತುಂಡುಗಳನ್ನು ಇಟ್ಟುಕೊಂಡಿದ್ದಕ್ಕಾಗಿ ವಿಜಯ ಕುಮಾರ್ ಎಂಬಾತನ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment