ಜೈಲ್‌ ಸರ್ಕಲ್‌ನಲ್ಲಿ ಸ್ವಲ್ಪ ಯಾಮಾರಿದ್ರು ಬೈಕ್‌ ಸವಾರರಿಗೆ ಅಪಾಯ ಫಿಕ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 MAY 2023

SHIMOGA : ಸ್ಮಾರ್ಟ್‌ ಸಿಟಿ (Smart City) ಯೋಜನೆಯ ಅಪೂರ್ಣ ಕಾಮಗಾರಿಯಿಂದ ಜೈಲ್‌ ವೃತ್ತದಲ್ಲಿ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. ತಿರುವಿನಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಜೆಲ್ಲಿ ಕಲ್ಲುಗಳನ್ನು ಹಾಗೆ ಬಿಡಲಾಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ.

Unfinished-Smart-city-works-in-Shimoga-Jail-Circle.

ಜೈಲ್‌ ವೃತ್ತದ ಒಂದು ಬದಿಯಲ್ಲಿ ಸ್ಮಾರ್ಟ್‌ ಸಿಟಿ (Smart City) ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಹೈಟೆಕ್‌ ಪೊಲೀಸ್‌ ಚೌಕಿ ನಿರ್ಮಿಸಿ, ಅದರ ಮುಂದೆ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಡಲಾಗಿದೆ. ಕೆಲ ತಿಂಗಳಿಂದ ಇದೇ ಪರಿಸ್ಥಿತಿ ಇದೆ.

Unfinished Smart city works at Shimoga Jail Circle

ದ್ವಿಚಕ್ರ ವಾಹನ ಸವಾರರಿಗೆ ಕಷ್ಟ

ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಜೆಲ್ಲಿ ಕಲ್ಲುಗಳನ್ನು ರಸ್ತೆ ಮೇಲೆ ಹಾಕಿ ಹಾಗೆಯೇ ಬಿಡಲಾಗಿದೆ. ಕುವೆಂಪು ರಸ್ತೆಯಿಂದ ಬರುವ ವಾಹನಗಳು ದುರ್ಗಿಗುಡಿ, ಎಲ್‌ಎಲ್‌ಆರ್‌ ರಸ್ತೆಗೆ ಹೋಗಬೇಕಿದ್ದರೆ ಇಲ್ಲಿ ಎಡಕ್ಕೆ ತಿರುವು ಪಡೆಯಬೇಕು. ಆದರೆ ತಿರುವಿನಲ್ಲಿ ಜೆಲ್ಲಿ ಕಲ್ಲುಗಳನ್ನು ಹಾಕಿರುವುದರಿಂದ ದ್ವಿಚಕ್ರ ವಾಹನ ಸವರರು ಮೈಯಲ್ಲ ಕಣ್ಣಾಗಿಸಿಕೊಂಡು ವಾಹನ ಚಲಾಯಿಸಬೇಕಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಇನ್ನು, ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ದುರ್ಗಿಗುಡಿ ಕಡೆಗೆ ತೆರಳುವ ವಾಹನಗಳು ಅಲ್ಲಿ ನಿಧಾನವಾಗಿ ಚಲಿಸುತ್ತವೆ. ಇದರಿಂದ ಜೈಲ್‌ ಸರ್ಕಲ್‌ನಲ್ಲಿ ಸಂಚಾರ ದಟ್ಟಣೆಯು ಉಂಟಾಗುತ್ತಿದೆ.

Unfinished Smart city works at Shimoga Kuvempu Road

ಚರಂಡಿಗೆ ಹೊದಿಕೆಯಾದ ಅಂಬೇಡ್ಕರ್‌ ನಾಮಫಲಕ

ಜೈಲ್‌ ಸರ್ಕಲ್‌ನಲ್ಲಿ ಪೊಲೀಸ್ ಚೌಕಿ ಪಕ್ಕದಲ್ಲಿ ಚರಂಡಿ ಕಾಮಗಾರಿಯು ಪೂರ್ಣಗೊಂಡಿಲ್ಲ. ಇನ್ನೇನು ಮಳೆಗಾಲ ಶುರುವಾಗುತ್ತಿದೆ. ಮಳೆ ಜೋರಾದರೆ ಚರಂಡಿ ನೀರು ರಸ್ತೆಗೆ ನುಗ್ಗುವ ಸಾಧ್ಯತೆ ಇದೆ. ಚರಂಡಿ ಮೇಲೆ ಸ್ಲಾಬ್‌ಗಳನ್ನು ಮನಸೋಯಿಚ್ಛೆ ಹಾಕಲಾಗಿದೆ. ಒಂದು ಬದಿಯಲ್ಲಿ ಸ್ಲಾಬ್‌ ಹಾಕುವ ಬದಲು ಡಾ. ಬಿ.ಆರ್.ಅಂಬೇಡ್ಕರ್‌ ಅವರ ಹೆಸರಿನ ನಾಮಫಲಕವನ್ನೇ ಚರಂಡಿಗೆ ಮುಚ್ಚಲಾಗಿದೆ.

ಇದನ್ನೂ ಓದಿ – ಯಡಿಯೂರಪ್ಪ ತೋಟದ ಪಕ್ಕದಲ್ಲಿ ಪುನುಗು ಬೆಕ್ಕು ಬಲಿ ಕೊಟ್ಟು ಮಾಟ ಮಂತ್ರ, ಸಂಸದ ರಾಘವೇಂದ್ರ ಹೇಳಿದ್ದೇನು?

ಜೈಲ್‌ ವೃತ್ತದಲ್ಲಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 16, 2023

Leave a Comment