SHIVAMOGGA LIVE | 29 JUNE 2023
SHIMOGA : ಪಾರ್ಟ್ ಟೈಮ್ ಉದ್ಯೋಗ (Part Time Job) ಹುಡುಕುತ್ತಿದ್ದ ಗೃಹಣಿಯೊಬ್ಬರು ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ 11 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಹೇಗಾಯ್ತು ವಂಚನೆ?
ತೀರ್ಥಹಳ್ಳಿ ತಾಲೂಕು ಗ್ರಾಮವೊಂದರ ಗೃಹಿಣಿಯೊಬ್ಬರಿಗೆ (ಹೆಸರು ಗೌಪ್ಯ) ಟೆಲಿಗ್ರಾಂ ಆಪ್‌ನಲ್ಲಿ ಪಾರ್ಟ್ ಟೈಮ್ (Part Time Job) ಉದ್ಯೋಗವಿದೆ, ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಿರಿ ಎಂದು ಮೆಸೇಜ್ ಬಂದಿತ್ತು. ಮೆಸೇಜ್ ನಂಬಿದ ಗೃಹಣಿ ಹಣ ಹೂಡಿಕೆ ಮಾಡಿದ್ದರು. ಮೊದಲಿಗೆ 10 ಸಾವಿರ ರೂ. ಹೂಡಿಕೆ ಮಾಡಿದ್ದು, ಅತ್ತ ಕಡೆಯಿಂದ ಮೊದಲ ಟಾಸ್ಕ್ ನೀಡಿದ್ದರು. ಅದನ್ನು ಗೃಹಿಣಿ ಕಂಪ್ಲೀಟ್ ಮಾಡಿದ್ದಾರೆ. ಕೂಡಲೆ ಅವರ ಖಾತೆಗೆ 16,847 ರೂ. ಹಣ ಜಮೆಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಪಾರ್ಟ್ ಟೈಮ್ ಜಾಬ್, 200 ರೂ. ಹೂಡಿಕೆ ಮಾಡಿ 324 ರೂ. ಗಳಿಸಿ, ನಂಬಿದ ವ್ಯಕ್ತಿ ಕಥೆ ಮುಂದೇನಾಯ್ತು?
ವಾರ ಪೂರ್ತಿ ಹಣ ಹೂಡಿಕೆ
ಮೊದಲಿಗೆ ದೊಡ್ಡ ಮೊತ್ತದ ಲಾಭಾಂಶ ದೊರೆತಿದ್ದರಿಂದ ಖುಷಿಯಾದ ಗೃಹಿಣಿ, ಜೂ.20 ರಿಂದ 26ರವರೆಗೆ ವಿವಿಧ ಹಂತದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಒಂದು ವಾರದಲ್ಲಿ ಒಟ್ಟು 11,03,139 ರೂ. ಹಣ ಹೂಡಿಕೆ ಮಾಡಿ, ವಿವಿಧ ಟಾಸ್ಕ್ ಪೂರೈಸಿದ್ದರು. ಆದರೆ ಅಸಲು ಮತ್ತು ಲಾಭದ ಹಣ ಮಾತ್ರ ಗೃಹಿಣಿಯ ಬ್ಯಾಂಕ್ ಖಾತೆಗೆ ಹಿಂತಿರುಗಲಿಲ್ಲ. ಇದರಿಂದ ಅನುಮಾನಗೊಂಡು ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಇಂಜಿನಿಯರ್ ಪತ್ನಿ ಕೊಲೆ ಕೇಸ್, ಕಾರು ಚಾಲಕ ಸೇರಿ ಆರು ಮಂದಿ ಅರೆಸ್ಟ್
ವಂಚನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
‘ಪಾರ್ಟ್ ಟೈಮ್’ ವಂಚನೆ
ಪಾರ್ಟ್ ಟೈಮ್ ಉದ್ಯೋಗ ಹೆಸರಿನಲ್ಲಿ ದೇಶಾದ್ಯಂತ ನಾನಾ ಬಗೆಯಲ್ಲಿ ವಂಚನೆ ಮಾಡಲಾಗುತ್ತಿದೆ. ಟೆಲಿಗ್ರಾಂ ಅಪ್ಲಿಕೇಷನ್ ಮೂಲಕ ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ವಂಚಿಸುತ್ತಿರುವುದು ಒಂದು ಬಗೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೆ ಹಲವರು ಈ ವಂಚಕರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಹಣ ಹೂಡಿಕೆ ಮಾಡುವಾಗ ಎಚ್ಚರ ವಹಿಸಬೇಕಿದೆ. ಇಲ್ಲವಾದಲ್ಲಿ ಲಕ್ಷಾಂತರ ರೂ. ಕಳೆದುಕೊಂಡು ತಲೆ ಮೇಲೆ ಕೈ ಹೊತ್ತು ಕೂರಬೇಕಾಗುತ್ತದೆ.