ಹೊಳೆಹೊನ್ನೂರಿನಲ್ಲಿ ಶ್ರೀಗಳ ಆಶೀರ್ವಚನ, ಎಲ್ಲವನ್ನೂ ದೇವರಿಗೆ ಅರ್ಪಿಸಿ ಅನುಭವಿಸಬೇಕು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 AUGUST 2023

HOLEHONNURU : ಭಗವಂತನಿಗೆ ಭಕ್ತರ (Devotees) ಮೇಲೆ ಅಪಾರ ಔದಾರ್ಯವಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.

28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ  ಶ್ರೀಗಳು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು. ಅನ್ನ, ವಸ್ತ್ರ, ಜೀವನ ಎಲ್ಲವನ್ನೂ ಕೊಟ್ಟು ಸಲಹಿದ್ದಾನೆ.  ಅನ್ನ ಕೊಟ್ಟು ಹೊಟ್ಟೆ ತುಂಬಿಸಿದ್ದಾನೆ. ವಸ್ತ್ರವನ್ನು ನೀಡಿ ಮಾನ ಕಾಪಾಡಿದ್ದಾನೆ. ಜೀವನವನ್ನು ಕೊಟ್ಟು ಸುಖ ಅನುಭವಿಸಲೂ ಅವಕಾಶ ನೀಡಿದ್ದಾನೆ. ಆದರೆ ನಾವು (Devotees) ಎಲ್ಲವನ್ನೂ ದೇವರಿಗೆ ಅರ್ಪಿಸಿ ಅನುಭವಿಸಬೇಕು. ಆ ಕೃತಜ್ಞತೆ ನಮಗೆ ಇರಬೇಕು ಎಂದರು.

ಪ್ರಚವನ ನೀಡಿದ ಪಂಡಿತ ಭಾರತೀರಮಣಾಚಾರ್ಯ ಗಣಾಚಾರ್ಯ, ಜೀವನದಲ್ಲಿ ನಮಗೆ ದೇವರಲ್ಲಿ ಭಕ್ತಿ ಮತ್ತು ವಿಷಯ ಪದಾರ್ಥಗಳಲ್ಲಿ ವೈರಾಗ್ಯ ಇರಬೇಕು. ಆದರೆ ನಾವು ಇದಕ್ಕೆ ವ್ಯತಿರಿಕ್ತವಾಗಿ ಬದುಕುತ್ತೇವೆ. ನಮಗೆ ದೇವರ ಬಗ್ಗೆ ವೈರಾಗ್ಯ ಮತ್ತು ಲೌಖಿಕದಲ್ಲಿ ಆಸಕ್ತಿ ಇರುತ್ತದೆ. ಇದು ನಮ್ಮ ಸಾಧನೆಗೆ ಇರುವ ದೊಡ್ಡ ಪ್ರತಿಬಂಧಕ ಎಂದರು.

ಇದನ್ನೂ ಓದಿ – ಕೇಂದ್ರ ಸಚಿವರನ್ನು ಭೇಟಿಯಾದ ಶಿವಮೊಗ್ಗ ಸಂಸದ, ಮೆಕ್ಕೆಜೋಳ ಕುರಿತು ಮಹತ್ವದ ಮನವಿ, ಏನಿದೆ ಮನವಿಯಲ್ಲಿ?

ಅರ್ಥವೇ ಇಂದು ಅನರ್ಥಕ್ಕೆ ಕಾರಣ ಆಗುತ್ತಿದೆ. ಒಬ್ಬರಿಗೆ ನೋವು ಕೊಟ್ಟು, ಬಲವಂತದಿಂದ ಪಡೆದ, ಶ್ರಮರಹಿತವಾದ ಹಣ ನಮ್ಮ ಅವನತಿಗೆ ಕಾರಣವಾಗುತ್ತದೆ. ಅದೇ ರೀತಿ ವಿಷಯ ಕಾಮನೆಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ ಎಂದರು.

ಬರೋಡದ ವಸಂತಾಚಾರ್ಯ ಜಹಗೀರ್‌ದಾರ್, ಶ್ರೀನಿ ಆಚಾರ್ ಬಲ್ಲರವಾಡಿ ಪ್ರವಚನ ನೀಡಿದರು. ಒರಿಸ್ಸಾದ ಜಗನ್ನಾಥ ಪುರಿ ಕ್ಷೇತ್ರದ ನೀಲಮೇಘ ಶ್ಯಾಮ ಮತ್ತು ಜಗನ್ನಾಥನ ಪ್ರಸಾದವನ್ನು ಶ್ರೀಗಳಿಗೆ ಸಮರ್ಪಿಸಿದರು. ಕೊಪ್ಪರ ನರಸಿಂಹ ದೇವರ ಪ್ರಸಾದವನ್ನು ಕೂಡ ಇದೇ ವೇಳೆ ಶ್ರೀಗಳಿಗೆ ಸಮರ್ಪಿಸಲಾಯಿತು.

ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಕಾರ್ಯದರ್ಶಿ ಕೆ.ಎನ್. ಗುರುರಾಜ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಗೋಪೀನಾಥ ನಾಡಿಗ್ ಮೊದಲಾದವರಿದ್ದರು.

PARISHRAMA neet academy

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 11, 2023

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

Leave a Comment