‘ಶಿವಮೊಗ್ಗ ಬೈಪಾಸ್‌ ವಾದಿ-ಎ-ಹುದಾ ಬಳಿ ಡಿವೈಡರ್‌ ಬೇಡʼ | ಆಟೋ ಕಾಂಪ್ಲೆಕ್ಸ್‌ನಲ್ಲಿ ರಾಜ್ಯೋತ್ಸವ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 DECEMBER 2023

FATAFAT-NEWS-1SHIMOGA : ನಗರದ ಬೈಪಾಸ್‌ ರಸ್ತೆಯ ವಾದಿ-ಎ-ಹುದಾ ಬಳಿ ಡಿವೈಡರ್‌ ಅಳವಡಿಸದಂತೆ ರಾಜ್ಯ ನಿಸ್ವಾರ್ಥ ಜನಶಕ್ತಿ ವೇದಿಕೆ ವತಿಯಿಂದ ಸಂಘಟನೆಯ ರಾಜ್ಯಾಧ್ಯಕ್ಷ ಎಂ.ಸಮೀವುಲ್ಲಾ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಡಿವೈಡರ್‌ ಅಳವಡಿಸಿದರೆ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಇದೆ ರಸ್ತೆಯಲ್ಲಿ ಇಂದಿರಾನಗರ, ಸೂಳೆಬೈಲು ರಸ್ತೆ ಡಿವೈಡರ್‌ ಇಲ್ಲ. ಇದೆ ಮಾದರಿ ವಾದಿ-ಎ-ಹುದಾಗು ಡಿವೈಡರ್‌ ಅಳವಡಿಸಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

wadi e huda

ಆಟೋ ಕಾಂಪ್ಲೆಕ್ಸ್‌ನಲ್ಲಿ ರಾಜ್ಯೋತ್ಸವ

FATAFAT-NEWS-2SHIMOGA : ಶಿವಮೊಗ್ಗ ಸಾಗರ ರಸ್ತೆಯ ಆಟೋ ಕಾಂಪ್ಲೆಕ್ಸ್‌ನ ಕಾರ್ಮಿಕರ ಜ್ಯೋತಿ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ (karnataka rajyotsava) ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರುಗಳಾದ ಗೌರವಾಧ್ಯಕ್ಷ ಎನ್.ರಮೇಶ್ ಬಾಬು, ಅಧ್ಯಕ್ಷ ಶಿವಾಜಿ, ಉಪಧ್ಯಕ್ಷ ಖಲೀಲ್, ಕಾರ್ಯದರ್ಶಿ ಸೈಯದ್ ಖಾದರ್‌, ಸಹ ಕಾರ್ಯದರ್ಶಿ ಗೋಪಿ, ಜಬ್ಬರ್, ಖಜಾಂಜಿ ಪ್ರಕಾಶ್, ಮನ್ಸೂರ್ ಸೇರಿದಂತೆ ಮುಂತಾದವರು ಇದ್ದರು.

auto

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 1, 2023

Leave a Comment