ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 DECEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
RIPPONPETE : ಇಲ್ಲಿನ ಶ್ರೀ ಕ್ಷೇತ್ರ ಹೊಂಬುಜದ ಪದ್ಮಾವತಿ ದೇವಿಗೆ ಭಕ್ತರು ಚಿನ್ನದ ಸೀರೆ (Gold saree) ಅರ್ಪಿಸಿದ್ದಾರೆ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇವಿಗೆ ವಿಶೇಷವಾದ ಸೀರೆ ಅರ್ಪಿಸಲಾಯಿತು.
ವಿಶಿಷ್ಟ ವಿನ್ಯಾಸ ಆಕರ್ಷಕವಾಗಿರುವ ಚಿನ್ನದ ಸೀರೆಯನ್ನು (Gold saree) ರಾಜ್ಯದ ವಿವಿಧೆಡೆಯ ಭಕ್ತರು ಪದ್ಮಾವತಿ ದೇವಿಗೆ ಅರ್ಪಿಸಿದರು. ದೇವಿಗೆ ಸೀರೆ ತೊಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇಗುಲದಲ್ಲಿ ಲಕ್ಷ ದೀಪೋತ್ಸವ
ಶ್ರೀ ಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಾರ್ಷಿಕ ಪೂರ್ವಪರಂಪರೆಯಂತೆ ಲಕ್ಷ ದೀಪೋತ್ಸವ ನೆರವೇರಿಸಲಾಯಿತು. ದೇಗುಲದ ಆವರಣದಲ್ಲಿ ಭಕ್ತರು ಹಣತೆ ಬೆಳಗಿ ದೇವರಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ- ರಾತ್ರಿ 12 ಗಂಟೆಗೆ ಮುಗಿಯಿತು ಶಿವಮೊಗ್ಗ ಪಾಲಿಕೆ ಅಧಿಕಾರವಧಿ, ಇವತ್ತಿನಿಂದ ಎಲ್ಲ ಸದಸ್ಯರು ಮಾಜಿ
ಪಟ್ಟಾಭಿಷೇಕ ವರ್ಧಂತ್ಯುತ್ಸವ, ಗುರುವಂದನೆ
ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ 12ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಕಾರ್ಯಕ್ರಮ ನಡೆಯಿತು. ಪ್ರಾತಃಕಾಲ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು. ಬಳಿಕ 1008 ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಅಷ್ಟವಿಧಾರ್ಚನೆ ಪೂಜೆ ನೆರವೇರಿಸಲಾಯಿತು. ಸ್ವಾಮೀಜಿ ಅವರ ಪೀಠಾರೋಹಣ ಆಗಮೋಕ್ತಿ ವಿಧಿ ಪೂರ್ವಕ ನೆರವೇರಿಸಲಾಯಿತು. ಪುರೋಹಿತರಾದ ಪದ್ಮರಾಜ ಇಂದ್ರರವರು ಬಿರುದಾವಳಿ ಹೇಳಿದರು.
‘ಜ್ಞಾನ ಸಂಪಾದನೆ ಗುರಿಯಾಗಬೇಕು’
ಗುರುವಂದನೆ ಕಾರ್ಯಕ್ರಮದ ಬಳಿಕ ಆಶೀರ್ವಚನ ನೀಡಿದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಆಧ್ಯಾತ್ಮಿಕ ಜ್ಞಾನದಿಂದ ಮಾತ್ರ ಸುಖದ ಅನುಭೂತಿ ಸಾಧ್ಯ. ಭೌತಿಕ ವಸ್ತುಗಳ ಸಂಗ್ರಹದಿಂದ ಯಾಂತ್ರಿಕ, ವೈಜ್ಞಾನಿಕ ವಿಷಯಗಳಿಂದ ಮನುಷ್ಯನಿಗೆ ಸುಖ ಲಭಿಸದು. ಜ್ಞಾನ ಸಂಪಾದನೆ ಪ್ರತಿಯೊಬ್ಬರ ಗುರಿಯಾಗಬೇಕು ಎಂದರು.