ಸಾಗರದಲ್ಲಿ ಸಾಹಿತಿ ನಾ.ಡಿಸೋಜಾಗೆ ನಾಗರಿಕರ ಪರವಾಗಿ ಸನ್ಮಾನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 JANUARY 2024

SAGARA : ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ಘೋಷಿಸಿರುವ ಹಿನ್ನೆಲೆ ಸಾಹಿತಿ ನಾ. ಡಿಸೋಜಾ ಅವರನ್ನು ನಾಗರಿಕರ ಪರವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಸನ್ಮಾನಿಸಿದರು. ಮನೆ ಮುಂಭಾಗದಲ್ಲಿ ನಾ. ಡಿಸೋಜಾ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ರಾಜ್ಯ ಸರ್ಕಾರ ನಾ. ಡಿಸೋಜಾ ಅವರಿಗೆ ಪಂಪ ಪ್ರಶಸ್ತಿ ಘೋಷಿಸಿರುವುದು ಸಾಗರ ತಾಲೂಕಿನ ಜನ ಸಂಭ್ರಮ ಪಡುತ್ತಿದಾರೆ. ಈಗಾಗಲೇ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಇದು ಅವರ ಸಾಹಿತ್ಯದ ಹಿರಿಮೆ ಎಂದು ತಿಳಿಸಿದರು.

ಪ್ರಮುಖರಾದ ಚೇತನ್‌ ರಾಜ್‌ ಕಣ್ಣೂರು, ಸುರೇಶ್‌ ಬಾಬು, ದಿನೇಶ್‌, ಸೋಮಶೇಖರ್‌ ಲ್ಯಾವಿಗೆರೆ, ಅಶೋಕ ಬೇಳೂರು, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ – ಸವಳಂಗ ರಸ್ತೆ ಸೇತುವೆ, ಕಾಮಗಾರಿ ಬಾಕಿ ಇರುವಾಗಲೆ ವಾಹನ ಸಂಚಾರ ಶುರು, ಅಕ್ಕಪಕ್ಕದ ಬಡಾವಣೆ ವಾಸಿಗಳ ನಿಟ್ಟುಸಿರು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 27, 2024

Leave a Comment