ಹೊಳೆ ಬಸ್‌ ನಿಲ್ದಾಣದ ಬಳಿ ರೈತನ ಮೇಲೆ ಬ್ಲೇಡ್‌ನಿಂದ ದಾಳಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 FEBRUARY 2024

SHIMOGA : ನಗರದ ಹೊಳೆ ಬಸ್‌ ನಿಲ್ದಾಣದಲ್ಲಿ ರೈತರೊಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಬ್ಲೇಡ್‌ನಿಂದ ಹಲ್ಲೆ ನಡೆಸಲಾಗಿದೆ. ಗೋಪಿಶೆಟ್ಟಿಕೊಪ್ಪದ ವೆಂಕಟೇಶ್‌ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಜನ ಬೇಕು ಎಂದು ಫೆ.21ರಂದು ಬೆಳಗ್ಗೆ ಹೊಳೆ ಬಸ್‌ ನಿಲ್ದಾಣದ ಬಳಿ ಬಂದಿದ್ದರು. ಈ ಸಂದರ್ಭ ತರೀಕೆರೆಯ ರಫೀಕ್‌ ಎಂಬಾತ ವೆಂಕಟೇಶ್‌ ಅವರನ್ನು ‘ಅರ್ಧ ಬಾಂಡ್ಲಿʼ ಎಂದು ಕರೆದು ಕೆಣಕಿದ್ದಾನೆ. ಇದನ್ನು ಪ್ರಶ್ನಿಸಿದಾಗ ರಫೀಕ್‌ ತನ್ನ ಬರ್ಮುಡಾ ಚಡ್ಡಿಯಟ್ಟಿದ್ದ ಬ್ಲೇಡ್‌ ತೆಗೆದು ವೆಂಕಟೇಶ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಮುಷ್ಠಿ ಕಟ್ಟಿ ಗುದ್ದಿದ್ದಾನೆ ಎಂದು ಆರೋಪಿಸಲಾಗಿದೆ.

ವೆಂಕಟೇಶ್‌ ಅವರ ಪರಿಚಿತರು ಮತ್ತು ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ. ಗಾಯಗೊಂಡಿದ್ದ ವೆಂಕಟೇಶ್‌ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ತುಂಗಾ ನದಿಯಲ್ಲಿ ಉಡುಪಿ ಜಿಲ್ಲೆ ವ್ಯಕ್ತಿಯ ಮೃತದೇಹ ಪತ್ತೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment