ಲೋಕಸಭೆ ಚುನಾವಣೆಗೆ ಗೀತಾ, ಶಿವಮೊಗ್ಗದಲ್ಲಿ ನಟ ಶಿವರಾಜ್‌ ಕುಮಾರ್‌ ಹೇಳಿದ್ದೇನು? ಇಲ್ಲಿದೆ 3 ಪ್ರಮುಖ ಪಾಯಿಂಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 MARCH 2024

SHIMOGA : ಲೋಕಸಭೆ ಚುನಾವಣೆಗೆ ಗೀತಾ ಶಿವರಾಜ್‌ ಕುಮಾರ್‌ ಸ್ಪರ್ಧಿಸುವ ಕುರಿತು ನಟ ಶಿವರಾಜ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಮಧು ಬಂಗಾರಪ್ಪ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ಸಂಗತಿಗಳ ಕುರಿತು ಮಾತನಾಡಿದರು.

3 ಪ್ರಮುಖ ಪಾಯಿಂಟ್

POINT-1ಪತ್ನಿ ಗೀತಾ ಶಾಸಕಿ, ಸಂಸದೆಯಾಗಿ ಆಯ್ಕೆಯಾಗಬೇಕು ಎಂಬ ಆಸೆ ಎಲ್ಲರಂತೆ ಪತಿಯಾಗಿ ನನಗೂ ಇದೆ. ಗೀತಾ ಶಿವರಾಜ್‌ಕುಮಾರ್ ಈಗಾಗಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಸಕಿ ಅಥವಾ ಸಂಸದೆಯಾಗಿ ಆಯ್ಕೆಯಾದರೆ ಮಹಿಳೆಯರಿಗೊಂದು ಸ್ಫೂರ್ತಿ ದೊರೆಯಲಿದೆ. ಇದಕ್ಕಾಗಿಯೇ ಅವರು ಜನಪ್ರತಿನಿಧಿ ಆಗಬೇಕು ಎಂಬ ಆಸೆ ಇದೆ.

POINT-2ಗೀತಾ ಶಿವರಾಜ್‌ಕುಮಾರ್ ಅವರನ್ನು ಒಬ್ಬ ಸೆಲೆಬ್ರಿಟಿ ಆಗಿ ನೋಡುವ ಅಗತ್ಯ ಇಲ್ಲ. ಸಮಾಜ ಸೇವೆಯಲ್ಲಿ ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ. ಆಕೆ ರಾಜಕೀಯ ಕುಟುಂಬದಿಂದ ಬಂದಿರುವುದರಿಂದ ಸಹಜವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯ ಹೊಂದಿದ್ದಾರೆ. 

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಚಿವ ಮಧು ಜನ್ಮದಿನ, ‘ಸ್ಪೆಷಲ್‌ ಕೇಕ್‌ನ ಸೀಕ್ರೆಟ್‌’ ಬಹಿರಂಗಪಡಿಸಿದ ನಟ ಶಿವರಾಜ್‌ ಕುಮಾರ್‌

POINT-3ಪಕ್ಷದ ಹೈಕಮಾಂಡ್ ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಇಲ್ಲವಾದರೆ ಬೇಸರವಿಲ್ಲ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ನನ್ನ ಬೆಂಬಲ ಇರುತ್ತದೆ. ಪ್ರಚಾರಕ್ಕೂ ಬರುತ್ತೇನೆ. ಸಿನಿಮಾ ಚಿತ್ರೀಕರಣದ ದಿನಗಳನ್ನು ನೋಡಿಕೊಂಡು ಪ್ರಚಾರ ನಡೆಸುತ್ತೇನೆ. ನಾನು ಸಿನಿಮಾರಂಗದಲ್ಲಿ ಇರುವುದರಿಂದ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶ ಹೊಂದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 3, 2024

Leave a Comment