‘ಬಿಜೆಪಿಯ ರಾಘವೇಂದ್ರ ನಾಳೆ ಬಾ ಗಿರಾಕಿ’, ಶಿವಮೊಗ್ಗದಲ್ಲಿ ಕಾಂಗ್ರೆಸ್‌ ವಕ್ತಾರ ವ್ಯಂಗ್ಯ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 APRIL 2024

ELECTION NEWS : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನೆ ಬಾಗಿಲಿಗೆ ಬಂದರೆ ನಾಳೆ ಬನ್ನಿ ಎಂದು ತಿಳಿಸಿ. ನೀವು ಇವತ್ತಿಗೆ ಉಪಯೋಗ ಆಗುವ ಯಾವುದೆ ಕೆಲಸ ಮಾಡಿಲ್ಲ. ಆದ್ದರಿಂದ ನೀವು ನಾಳೆ ಬಾ ಗಿರಾಕಿ ಎಂದು ತಿಳಿಸಿ ಕಳುಹಿಸಿ ಎಂದು ರಾಜ್ಯ ಕಾಂಗ್ರೆಸ್‌ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಉತ್ತರ ಬ್ಲಾಕ್‌ ಕಾಂಗ್ರೆಸ್‌ನ ಬೂತ್‌ ಅಧ್ಯಕ್ಷರ ಸಮಾವೇಶ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸುಧೀರ್‌ ಕುಮಾರ್‌ ಭಾಷಣದ 5 ಪ್ರಮುಖಾಂಶ

point-1ಈ ಬಾರಿಯ ಚುನಾವಣೆ ಕೂಗುಮಾರಿಗಳು ವರ್ಸಸ್‌ ಜೀವಪರತೆಗಳ ಮಧ್ಯೆ ನಡೆಯಲಿದೆ. ಕೂಗುಮಾರಿ ಬಿಜೆಪಿಯವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದವರು ಜನರ ಮನೆ ಬಳಿ ಹೋಗಲು ಬಿಡುತ್ತಿರಲಿಲ್ಲ. ಈಗ ಕಾಂಗ್ರೆಸ್‌ನವರು ಹೋದರೆ ನೀರು, ಬೆಲ್ಲ ಕೊಟ್ಟು ಮನೆಯೊಳಗೆ ಕರೆಯುತ್ತಾರೆ. ಕಾಂಗ್ರೆಸ್ ಪಕ್ಷ ಎಂದಿಗೂ ತನ್ನ ಕಾರ್ಯಕರ್ತರು ತಲೆ ತಗ್ಗಿಸುವಂತೆ ಮಾಡುವುದಿಲ್ಲ.

Booth Presidents meeting

point-2ಚುನಾವಣಾ ಬಾಂಡ್‌ ಹೆಸರಿನಲ್ಲಿ ಲಂಚಕ್ಕೂ ರಶೀದಿ ನೀಡಿದ ಹೀನ ಸ್ಥಿತಿಗೆ ಬಿಜೆಪಿ ತಲುಪಿದೆ. ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಕಾಂಗ್ರೆಸ್ ಇದ್ದಿದ್ದರೆ, ನಮ್ಮ ಕಾರ್ಯಕರ್ತರು ಬೀದಿಯಲ್ಲಿ ತಲೆ ಎತ್ತದ ಹಾಗೆ ಮಾಡುತ್ತಿದ್ದರು‌. ಬಿಜೆಪಿಯನ್ನು ವಿನಾಕಾರಣ ಬೆಂಬಲಿಸುತ್ತಿದ್ದ ಮೇಲ್ಮಮಧ್ಯಮ ವರ್ಗದವರಿಗೆ ಚುನಾವಣಾ ಬಾಂಡ್‌ನ ವಿಚಾರ ಬಯಲಾದ ಮೇಲೆ ಯೋಚಿಸುತ್ತಿದ್ದಾರೆ. ನಾ ಕಾವೂಂಗ, ನಾ ಖಾನೆ ದೂಂಗ ಅಂದವರ ಉತ್ತರವಿಲ್ಲವಾಗಿದೆ.

Booth Presidents meeting

point-3ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಏನು ಅನುಭವವಿದೆ ಎಂದು ರಾಘವೇಂದ್ರ ಅವರು ಪ್ರಶ್ನಿಸಿದ್ದಾರೆ. ನಿಮ್ಮಂತೆ ಚೆಕ್‌ನಲ್ಲಿ ಹಣ ಪಡೆದು ನಿಮ್ಮ ಅಕೌಂಟ್‌ಗೆ ಹಣ ಹಾಕಿಸಿಕೊಳ್ಳುವ ಅನುಭವ ಗೀತಾ ಶಿವರಾಜ್‌ ಕುಮಾರ್‌ ಅವರಿಗಿಲ್ಲ. ಚೋಟ ಸಿಗ್ನೇಚರ್ ಹಾಕಿ ಅಪ್ಪನನ್ನು ಜೈಲಿಗೆ ಕಳುಹಿಸಿದ ಅನುಭವವೂ ಇಲ್ಲ. ಆರಾಧನಾ, ಆಶ್ರಯ, ಗ್ರಾಮೀಣ ಕೃಪಾಂಕ ನೀಡಿದ ಬಂಗಾರಪ್ಪ ಅವರ ಮಗಳು. ಕನ್ನಡದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಡಾ.ರಾಜ್‌ಕುಮಾರ್‌ ಮನೆಯ ಸೊಸೆಯಾಗಿದ್ದಾರೆ. ಇದಕ್ಕಿಂತಲೂ ಇನ್ನೆಂತಹ ಅರ್ಹತೆ ಬೇಕು. ಇದೇ ಕಾರಣಕ್ಕೆ ಗೀತಾ ಶಿವರಾಜ್‌ ಕುಮಾರ್‌ ಅವರು ಸಮರ್ಥ ಅಭ್ಯರ್ಥಿ.

point-4ಈಶ್ವರಪ್ಪ ಅವರಿಗೆ ಯಡಿಯೂರಪ್ಪ ಮತ್ತು ರಾಘವೇಂದ್ರ ಅವರ ಮೇಲೆ ಸಿಟ್ಟಿದೆ. ಹಾಗಾಗಿ ಕಾಂಗ್ರೆಸ್‌ಗೆ ಮತ ನೀಡಿ ಯಡಿಯೂರಪ್ಪ, ರಾಘವೇಂದ್ರ ಅವರ ಮೇಲೆ ಸಿಟ್ಟು ತೀರಿಸಿಕೊಳ್ಳಲಿ.

 ಇದನ್ನೂ ಓದಿ ಆಯನೂರು ಮಂಜುನಾಥ್‌ ವಿರುದ್ಧ ಡಾ. ಧನಂಜಯ ಸರ್ಜಿ ಗರಂ, ತಕ್ಕ ಪಾಠದ ಭವಿಷ್ಯ

point-5ಬೂತ್‌ ಅಧ್ಯಕ್ಷರು ಚುನಾವಣೆ ಹೊತ್ತಿಗೆ ಪ್ರತಿ ಮನೆಗೆ ಕನಿಷ್ಠ ಐದು ಬಾರಿ ತೆರಳಬೇಕು. ಪ್ರತಿ ಮನೆಯಲ್ಲಿ ಕನಿಷ್ಠ ಹತ್ತು ನಿಮಿಷ ಕಳೆಯಬೇಕು. ಗ್ಯಾರಂಟಿ ಯೋಜನೆಗಳು, ಅದರ ಪ್ರಯೋಜನದ ಕುರಿತು ಮನವರಿಕೆ ಮಾಡಿಕೊಟ್ಟು ಮತ ಕೇಳಬೇಕು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 1, 2024

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

Leave a Comment