ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 15 APRIL 2024
SHIMOGA : ಈಶ್ವರಪ್ಪ ಅವರದ್ದು ಬಿಜೆಪಿ ಬಿ ಟೀಮ್ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವರು ತಮ್ಮ ಹೇಳಿಕೆ ತಿದ್ದಿಕೊಳ್ಳಬೇಕು. ಶೇ.60ರಷ್ಟು ಬಿಜೆಪಿ ಕಾರ್ಯಕರ್ತರು ತಮ್ಮೊಂದಿಗೆ ಇದ್ದಾರೆ. ಹಾಗಾಗಿ ತಮ್ಮದೇ ಒರಿಜಿನಲ್ ಬಿಜೆಪಿ ಎಂದು ಲೋಕಸಭೆ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ.ರಾಘವೇಂದ್ರ ಅವರದ್ದು ಬಿ ಟೀಮ್. ಹೊಂದಾಣಿಕೆ ಕಾರಣಕ್ಕೆ ಗೀತಾ ಶಿವರಾಜ್ ಕುಮಾರ್ ಅವರನ್ನು ಕಾಂಗ್ರೆಸ್ನಿಂದ ಸ್ಪರ್ಧೆಗಿಳಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯು ಹೊಂದಾಣಿಕೆಯಾಗಿತ್ತು. ಈಗಲೂ ಆಗಿದೆ. ಆದರೆ ನಾನು ಸಾಯುವವರೆಗೆ ಎ ಟೀಮ್. ಬಿಜೆಪಿಯಲ್ಲೆ ಇರುತ್ತೇನೆ ಎಂದರು.
ಈಶ್ವರಪ್ಪ ಅಂದಾಕ್ಷಣ ಜನರು ಬಿಜೆಪಿ ಎಂದುಕೊಳ್ಳುತ್ತಾರೆ. ಆದರೆ ನಾನು ಈಗ ಸ್ವತಂತ್ರ ಅಭ್ಯರ್ಥಿ. ಸದ್ಯ ಚುನಾವಣ ಚಿಹ್ನೆಗಾಗಿ ಕಾಯುತ್ತಿದ್ದೇನೆ. ಚಿಹ್ನೆ ಸಿಕ್ಕ ಬಳಿಕ ಕಾರ್ಯಕರ್ತರು ಎಲ್ಲ ಮತದಾರರಿಗು ತಲುಪಿಸುತ್ತಾರೆ ಎಂದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೆಳಗಿನ ಜಾವ ಪೊಲೀಸರ ದಾಳಿ, ಮನೆಗಳಲ್ಲಿ ಶೋಧ, ಕಾರಣವೇನು? ಎಲ್ಲೆಲ್ಲಿ ನಡೆಯಿತು ದಾಳಿ?
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






