ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 JUNE 2024
SHIMOGA : ನಗರದಲ್ಲಿ ಹಂದಿಗಳ (Pig) ಹಾವಳಿಗೆ ಜನ ಬೇಸತ್ತಿದ್ದಾರೆ. ಈ ಮಧ್ಯೆ ಹಂದಿ ಸಾಗಣೆಕಾದರರಿಗೆ ಮಹಾನಗರ ಪಾಲಿಕೆ ಖಡಕ್ ಎಚ್ಚರಿಕೆ ನೀಡಿದೆ. ಮೂರು ದಿನದಲ್ಲಿ ಹಂದಿಗಳನ್ನು ಖಾಲಿ ಮಾಡದೆ ಇದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಗಡುವು ನೀಡಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರು ವಿವಿಧೆಡೆ ಭೇಟಿ ನೀಡಿದ್ದ ಸಂದರ್ಭ ಹಂದಿ ಸಾಕಣೆ ವಿರುದ್ಧ ಸಾರ್ವಜನಿಕರು, ಜನಪ್ರತಿನಿಧಿಗಳು ದೂರು ನೀಡಿದ್ದರು. ಹಂದಿಗಳಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಗಡುವು ನಿಗದಿಪಡಿಸಲಾಗಿದೆ.
ಈ ಮೊದಲೆ ಎಚ್ಚರಿಕೆ ನೀಡಲಾಗಿತ್ತು
ಹಂದಿ ಸಾಕಣೆ ಮಾಡದಂತೆ ಮಹಾನಗರ ಪಾಲಿಕೆ ಅನೇಕ ಬಾರಿ ತಿಳಿವಳಿಕೆ ನೀಡಿದೆ. ಹಾಗಿದ್ದೂ ಹಂದಿ ಸಾಕಣೆ ಮಾಡಲಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯ ಹಿನ್ನೆಲೆ ಇನ್ನು ಮೂರು ದಿನದಲ್ಲಿ ಹಂದಿಗಳನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ಬೀಡಾಡಿ ಹಂದಿಗಳೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಕಾರು, ಬೈಕ್ ಮುಖಾಮುಖಿ ಡಿಕ್ಕಿ, ಮೂವರು ಯುವಕರ ಸ್ಥಿತಿ ಗಂಭೀರ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422