ಸಾಗರದ ಎಲ್‌.ಬಿ ಕಾಲೇಜು ವಿದ್ಯಾರ್ಥಿಗಳ ಆಕ್ರೋಶ, ಜೀಬ್ರಾ ಕ್ರಾಸ್‌, ಹಂಪ್‌ಗಳಿಗೆ ಒತ್ತಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 JUNE 2024

SAGARA : ಎಲ್‌ಬಿಎಸ್‌ ಕಾಲೇಜು ಮುಂಭಾಗ ಜೀಬ್ರಾ ಕ್ರಾಸ್‌ ಮತ್ತು ಹಂಪ್‌ಗಳನ್ನು (Humps) ಅಳವಡಿಸುವಂತೆ ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಳಿಕ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಜೂ.22ರಂದು ಅಪಘಾತ ಸಂಭವಿಸಿ ಎಲ್‌ಬಿಎಸ್‌ ಕಾಲೇಜು ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಅನುಷಾ ಮೃತಪಟ್ಟಿದ್ದಾರೆ. ಕಾಲೇಜು ಮುಂಭಾಗ ಸ್ಪೀಡ್‌ ಬ್ರೇಕರ್‌ ಇಲ್ಲದಿರುವುದೆ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಜೋಗ ರಸ್ತೆ ಕಳೆದ ವರ್ಷ ಅಗಲೀಕರಣ ಮಾಡಲಾಗಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಹಲವು ಶಾಲೆ, ಕಾಲೇಜುಗಳಿವೆ. ವಾಹನಗಳು ವೇಗವಾಗಿ ಓಡಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೆ ಹಲವು ವಿದ್ಯಾರ್ಥಿಗಳು ಅಪಘಾತಕ್ಕೀಡಾಗಿ ಗಾಯಗೊಂಡಿರುವ ಉದಾಹರಣೆ ಇದೆ. ಆದ್ದರಿಂದ ಎಲ್ಲ ಶಾಲೆ, ಕಾಲೇಜುಗಳ ಬಳಿ ವಾಹನಗಳ ವೇಗ ತಗ್ಗಿಸಲು ಸ್ಪೀಡ್‌ ಬ್ರೇಕರ್‌ ಅಳವಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಸದ್ಯದಲ್ಲೆ ಸ್ಪೀಡ್‌ ಬ್ರೇಕರ್‌ ಅಳವಡಿಕೆ

ನಗರಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಅಗತ್ಯ ಇರುವ ಕಡೆ ಬ್ಯಾರಿಕೇಡ್‌ ಮತ್ತು ಸ್ಪೀಡ್‌ ಬ್ರೇಕರ್‌ ಅಳವಡಿಸಲು ಮಾಹಿತಿ ಕೇಳಲಾಗಿದೆ. ಸದ್ಯದಲ್ಲೆ ಇವುಗಳನ್ನು ಅಳವಡಿಸಲಾಗುತ್ತದೆ. ಇನ್ನು ಅಲ್ಲಲ್ಲಿ ಕಳಪೆ ಕಾಮಗಾರಿಯಾಗಿದೆ ಎನ್ನಲಾಗುತ್ತಿದೆ. ಅದನ್ನು ಕೂಡ ಪರಿಶೀಲಿಸಲಾಗುತ್ತದೆ ಎಂದರು.

ಇದನ್ನೂ ಓದಿ – ಸಾಗರ ನರಸಭೆಗೆ MLA ದಿಢೀರ್‌ ಭೇಟಿ, ಕಾರ್ಯವೈಖರಿ ಪರಿಶೀಲನೆ, ಕ್ಷೇತ್ರದ ಅಭಿವೃದ್ಧಿ ಕುರಿತು ಹೇಳಿದ್ದೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment