ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 22 AUGUST 2024 | ಮೆಗ್ಗಾನ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ತೆರಳಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಿಂದ ಎಟಿಎಂ ಕಾರ್ಡ್ ಕಳ್ಳತನ ಮಾಡಿ, ಹಣ ಡ್ರಾ ಮಾಡಿಕೊಳ್ಳಲಾಗಿದೆ. ಈ ಸಂಬಂಧ ತಡವಾಗಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೊರಬ ತಾಲೂಕು ಬಿಲವಾನಿಯ ಗೌರಮ್ಮ ಎಂಬುವವರ ಎಟಿಎಂ ಕಳ್ಳತನ ಮಾಡಿ 50 ಸಾವಿರ ರೂ. ಹಣ ಡ್ರಾ ಮಾಡಿಕೊಳ್ಳಲಾಗಿದೆ.
ಮೊಬೈಲ್ಗೆ ಬಂತು ಮೆಸೇಜ್
ಅನಾರೋಗ್ಯದ ಹಿನ್ನೆಲೆ ಗೌರಮ್ಮ ತಮ್ಮ ಪತಿಯೊಂದಿಗೆ ಜುಲೈ 25ರಂದು ಮೆಗ್ಗಾನ್ ಆಸ್ಪತ್ರೆ ಚಿಕಿತ್ಸೆಗೆ ಬಂದಿದ್ದರು. ಬೆಳಗ್ಗೆ 11 ಗಂಟೆಗೆ ಲ್ಯಾಬ್ನಲ್ಲಿ ರಕ್ತದ ಪರೀಕ್ಷೆ ಮಾಡಿಸಿಕೊಂಡಿದ್ದರು. ಮಧ್ಯಾಹ್ನ 1.30ರ ಹೊತ್ತಿಗೆ ಗೌರಮ್ಮ ಅವರ ಮೊಬೈಲ್ಗೆ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಹಣ ಕಡಿತವಾದ ಮೆಸೇಜ್ ಬಂದಿತ್ತು. ಸ್ವಲ್ಪ ಹೊತ್ತಿಗೆ ಒಟ್ಟು 50 ಸಾವಿರ ರೂ. ಕಡಿತವಾಗಿರುವ ಮೆಸೇಜ್ ಬಂದಿತ್ತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ ⇒ ಆಯನೂರಿನಲ್ಲಿ ಬೇಕರಿಗೆ ಬೆಂಕಿ, ಸಿಲಿಂಡರ್ಗಳು ಸ್ಪೋಟ, ಧಗಧಗ ಹೊತ್ತಿ ಉರಿದ ಅಂಗಡಿ
ಕಳ್ಳರಿಗೆ ಪಾಸ್ವರ್ಡ್ ಸಿಕ್ಕಿದ್ದು ಹೇಗೆ?
ಲ್ಯಾಬ್ ಬಳಿ ಸರತಿಯಲ್ಲಿ ನಿಂತಿದ್ದಾಗ ಗೌರಮ್ಮ ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಎಟಿಎಂ ಕಾರ್ಡ್ ಕಳವು ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಎಟಿಎಂ ಕಾರ್ಡ್ ಮೇಲೆಯೇ ಪಾಸ್ವರ್ಡ್ ಬರೆದಿದ್ದರಿಂದ ಕಳ್ಳರು ಸುಲಭವಾಗಿ ಹಣ ಡ್ರಾ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ 15 ದಿನದಲ್ಲಿ 54 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ, ಮುಂದಿನ ಟಾರ್ಗೆಟ್ ನೀವೆ