FATAFAT CRIME NEWS, 28 AUGUST 2024
ನಡುರಾತ್ರಿ ಸೇತುವೆಯಿಂದ ಕೆಳಗೆ ಹಾರಿದ ಕಾರು
ಶಿವಮೊಗ್ಗ ಲೈವ್.ಕಾಂ : ಸಿಗಂದೂರು, ಜೋಗ, ಕೊಲ್ಲೂರು ಪ್ರವಾಸ ಮುಗಿಸಿ ಚಿತ್ರದುರ್ಗದ ತಮ್ಮೂರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿ ಆರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಗರದಹಳ್ಳಿ ಅಶೋಕನಗರದ ನಡುವೆ ಸೇತುವೆಯಿಂದ ಕೆಳಗೆ ಚಾನಲ್ಗೆ ಕಾರು ಹಾರಿದೆ. ಸೋಮವಾರ ರಾತ್ರಿ 2.30ರ ಹೊತ್ತಿಗೆ ಘಟನೆ ಸಂಭವಿಸಿದೆ. ಚಾಲಕ ಕಾರ್ತಿಕ್ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಪ್ರಣಪಾಯದಿಂದ ಪಾರಾಗಿದ್ದಾರೆ.
ಬಸ್ ಡಿಕಿ, ಎರಡು ಎಮ್ಮೆಗಳು ಸ್ಥಳದಲ್ಲೇ ಸಾವು
ಶಿವಮೊಗ್ಗ ಲೈವ್.ಕಾಂ : ಮಿನಿ ಬಸ್ ಡಿಕ್ಕಿಯಾಗಿ ಗರ್ಭ ಧರಿಸಿದ್ದ ಎರಡು ಎಮ್ಮೆಗಳು ಸಾವನ್ನಪ್ಪಿವೆ. ಮೂರು ಎಮ್ಮೆಗಳು ಗಾಯಗೊಂಡಿವೆ. ಈ ಪೈಕಿ ಒಂದು ಎಮ್ಮೆಯ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯ ಜ್ಞಾನದೀಪ ಶಾಲೆ ಸಮೀಪ ಘಟನೆ ಸಂಭವಿಸಿದೆ. ಚಂದ್ರಶೇಖರ್ ಮತ್ತು ಗೋಪಾಲ್ ಎಂಬುವವರಿಗೆ ಸೇರಿದ ಎಮ್ಮೆಗಳು ಸಾವನ್ನಪ್ಪಿವೆ. ಶಾಲೆ ಸಮೀಪ ಮಠದ ಜಾಗದಲ್ಲಿ ಎಮ್ಮೆಗಳನ್ನು ಮೇಯಿಸಿಕೊಂಡು ಸಂಜೆ ಮನೆಗೆ ಹೊಡೆದುಕೊಂಡು ಹೋಗುವಾಗ ಬಸ್ ಡಿಕ್ಕಿ ಹೊಡೆದಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ ಭದ್ರಾವತಿ ನಗರಸಭೆಗೆ ನೂತನ ಉಪಾಧ್ಯಕ್ಷ, ಕುತೂಹಲ ಮೂಡಿಸಿದ ಮೂವರು ಬಿಜೆಪಿ ಸದಸ್ಯರ ನಡೆ
20 ಲಕ್ಷ ರೂ. ಮೌಲ್ಯದ ಒಡವೆ ನಾಪತ್ತೆ
ಶಿವಮೊಗ್ಗ ಲೈವ್.ಕಾಂ : ಮನೆಯ ಬೀರುವಿನಲ್ಲಿಟ್ಟಿದ್ದ 20 ಲಕ್ಷ ರೂ. ಮೌಲ್ಯದ ಒಡವೆಗಳು ಕಳ್ಳತನವಾಗಿದೆ. ವಿನೋದಾ ಎಂಬುವವರು ತಮ್ಮ ಮನೆಯ ಬೀರುವಿನಲ್ಲಿಟ್ಟಿದ್ದ ಹಲವು ಒಡವೆ ಕಳ್ಳತನವಾಗಿದೆ. ಒಂದಷ್ಟು ಒಡವೆ ಕಳುವಾಗಿದ್ದು, ಮತ್ತಷ್ಟು ಒಡವೆ, ನಗದು ಅಲ್ಲಿಯೇ ಇದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ ಸಾಗರದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200