ಶಿವಮೊಗ್ಗಕ್ಕೆ ಸುತ್ತೂರು ಮಠದ ರಥ, ಯಾವಾಗ ಬರುತ್ತೆ? ಹೇಗಿರುತ್ತೆ ಸ್ವಾಗತ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 25 DECEMBER 2024

ಶಿವಮೊಗ್ಗ : ಮೈಸೂರಿನ ಸುತ್ತೂರಿನಲ್ಲಿ ಜನವರಿ 26ರಿಂದ 31ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯ ಪ್ರಚಾರ ರಥ (Ratha) ಡಿಸೆಂಬರ್‌ 27ರಂದು ಶಿವಮೊಗ್ಗಕ್ಕೆ ನಗರಕ್ಕೆ ಆಗಮಿಸುತ್ತಿದೆ. ಮಲವಗೊಪ್ಪದ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ರಥವನ್ನು ಸ್ವಾಗತಿಸಲಾಗುತ್ತದೆ ಎಂದು ಸಮಿತಿಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  

ಜಾತ್ರೆಯಲ್ಲಿ ಪ್ರತಿ ದಿನ ಆರೇಳು ಲಕ್ಷ ಜನ ಸೇರುತ್ತಾರೆ. ಈ ಜಾತ್ರೆ ಮಹೋತ್ಸವದ ಹಿನ್ನೆಲೆ ಪ್ರಚಾರ ರಥ ನಗರಕ್ಕೆ ಆಗಮಿಸಲಿದೆ. ಮಂಗಳವಾದ್ಯಗಳ ಸಹಿತ ರಥವನ್ನು ಸ್ವಾಗತಿಸಲಾಗುತ್ತದೆ. ಮುರುಘ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಡಾ. ಬಸವಮರುಳ ಸಿದ್ಧ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಎರಡು ದಿನ ಶಿವಮೊಗ್ಗದಲ್ಲಿ ರಥ ಪ್ರಚಾರ ನಡೆಸಲಿದೆ.

ಹೊಳಲೂರು ನಿಂಗಪ್ಪ, ಸಮಿತಿ ಪ್ರಮುಖರು

RED-LINE-

1-lakh-views

2018ರಲ್ಲಿ ಶಿವಮೊಗ್ಗದಲ್ಲಿ ಸತ್ತೂರು ಶ್ರೀಗಳ ಉತ್ಸವ ನಡೆಸಿದ್ದೆವು. ಹಾಗಾಗಿ ಶಿವಮೊಗ್ಗದಲ್ಲಿಯು ಸುತ್ತೂರು ಮಠ ವಿದ್ಯಾ ಸಂಸ್ಥೆ ಆರಂಭಿಸಬೇಕು. ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸುತ್ತೂರು ಮಠದಲ್ಲಿ ಈಗಾಗಲೆ ಸಾವಿರಾರು ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ.

ಹೆಚ್.ಎಂ.ಚಂದ್ರಶೇಖರಪ್ಪ, ಮಾಜಿ ಶಾಸಕ

RED-LINE-

HM-Chandrashekarappa-Press-meet-in-Shimoga

ಸುತ್ತೂರು ಅಂದರೆ ಆತಿಥ್ಯಕ್ಕೆ ಪ್ರಾಶಸ್ತ್ಯ ನೀಡಲಾಗುತ್ತದೆ. ಅದು ಎಲ್ಲ ಮಠಗಳಿಗು ಮಾದರಿ. ಶಿಕ್ಷಣ ಸಂಸ್ಥೆ ಆರಂಭಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ. ಇನ್ನು, ಜಾತ್ರೆ ಹಿನ್ನೆಲೆ ಪ್ರಚಾರದ ರಥ ಯಾತ್ರೆ ಆಗಮಿಸುತ್ತಿದೆ. ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ‌.

ಬೆನಕಪ್ಪ, ಬಸವ ಕೇಂದ್ರದ ಅಧ್ಯಕ್ಷ

RED-LINE-

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 26, 2024

Leave a Comment