ಅಡಿಕೆ ಖೇಣಿದಾರರ ಜಿಲ್ಲಾ ಸಮಾವೇಶ
ಹೊಳೆಹೊನ್ನೂರು : ಮಾ.15ರಂದು ಬೆಳಗ್ಗೆ 10ಕ್ಕೆ ಮಾರಶೆಟ್ಟಿ ಸರ್ಕಲ್‌ನಲ್ಲಿರುವ ಛತ್ರಪತಿ ಶಿವಾಜಿ ಮರಾಠ ಸಮುದಾಯ ಭವನದಲ್ಲಿ ಜಿಲ್ಲಾ ಅಡಿಕೆ (Adike) ಖೇಣಿದಾರರ ಸಮಾವೇಶ ಆಯೋಜಿಸಲಾಗಿದೆ. ಅಡಿಕೆ ಮಾರುಕಟ್ಟೆ ಸ್ಥಿರತೆ, ಹಸಿ ಅಡಿಕೆಯ ತೂಕ, ಒಣ ಅಡಿಕೆ ಕೊಡುವ ಬಗೆ, ಅಡಿಕೆ ಖೇಣಿದಾರರ ಹಿತರಕ್ಷಣೆ ಕುರಿತು ಪ್ರಮುಖ ವಿಷಯ ಚರ್ಚೆ ನಡೆಸಲಾಗುತ್ತದೆ. ಹಲವು ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಆಸಕ್ತರು 9945525878 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಕಾಗೋಡು ತಿಮ್ಮಪ್ಪಗೆ ಸನ್ಮಾನ
ಸಾಗರ : ಒಂದೇ ದಿನ ಎರಡು ಗೌರವ ಡಾಕ್ಟರೇಟ್ ಗೌರವ ಪಡೆದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಗಣಪತಿ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್ ಆಧ್ಯಕ್ಷ ಆರ್.ಶ್ರೀನಿವಾಸ್, ಉಪಾಧ್ಯಕ್ಷ ವಿ.ಶಂಕರ್, ನಿರ್ದೇಶಕರಾದ ದೇವೇಂದ್ರಪ್ಪ, ಸರಸ್ವತಿ ನಾಗರಾಜ್, ಕೃಷ್ಣಮೂರ್ತಿ ಭಂಡಾರಿ, ನಾರಾಯಣ ಅರಮನೆಕೇರಿ, ಗುರುಬಸವಲಿಂಗ ಸೇರಿದಂತೆ ಹಲವರು ಇದ್ದರು.
ಎಂಟು ದಿನದ ರಂಗ ಶಿಬರಕ್ಕೆ ಚಾಲನೆ
ಸಾಗರ : ಎಸ್.ಎನ್.ನಗರದ ಭೂಮಿ ರಂಗಮನೆಯಲ್ಲಿ ಎಂಟು ದಿನದ ರಂಗ ತರಬೇತಿ ಶಿಬಿರ ಹರಿವು 2025ಗೆ ರಂಗಕರ್ಮಿ ಪರಶುರಾಮ ಸೂರನಗದ್ದೆ ಚಾಲನೆ ನೀಡಿದರು. ರಂಗಕರ್ಮಿ ಸತೀಶ್ ಶೆಣೈ, ಸ್ಪಂದನ ತಂಡದ ಎಂ.ವಿ.ಪ್ರತಿಭಾ, ಸಾವಿತ್ರಿ ಮೂರ್ತಿ, ಶಿವಕುಮಾರ್ ಉಳವಿ, ಪವನ್ ಸೇರಿಂತೆ ಹಲವರು ಇದ್ದರು.
ರಂಗಭೂಮಿಯಲ್ಲಿ ಕಲಿಕೆಗೆ ಕೊನೆಯಿಲ್ಲ. ಪ್ರತಿ ಕಲಾವಿದ, ತಂತ್ರಜ್ಞರು ಪ್ರತಿ ಪ್ರಯೋಗ, ಪ್ರದರ್ಶನದಿಂದ ಕಲಿಯುವುದು ಸಾಕಷ್ಟು ಇರಲಿದೆ. ಇಂತಹ ಶಿಬಿರಗಳಿಂದ ಹೊಸ ತಲೆಮಾರು ರಂಗಭೂಮಿಯಲ್ಲಿ ಸಕ್ರಿಯಗೊಳ್ಳಲು ಪ್ರೋತ್ಸಾಹ ನೀಡುತ್ತದೆ.
– ಪರಶುರಾಮ ಸೂರನಗದ್ದೆ, ರಂಗಕರ್ಮಿ

ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, ಎಲ್ಲೆಲ್ಲಿ? ಹೇಗಿದೆ ಹೋಳಿ ಹಬ್ಬದ ಸಿದ್ಧತೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200