BREAKING NEWS – ಶಿವಮೊಗ್ಗದಲ್ಲಿ ಅಂತರ ರಾಜ್ಯ ಕಳ್ಳನ ಕಾಲಿಗೆ ಗುಂಡೇಟು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಅಂತರ ರಾಜ್ಯ ಕಳ್ಳನೊಬ್ಬನ (Thief) ಕಾಲಿಗೆ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅಂತರ ರಾಜ್ಯ ಕಳ್ಳ ಮಂಜುನಾಥ್‌ ಅಲಿಯಾಸ್‌ ಕಲ್ಕೆರೆ ಮಂಜು ಎಂಬಾತನ ಕಾಲಿಗೆ ಇಂದು ಬೆಳಗ್ಗೆ ಗುಂಡು ಹಾರಿಸಲಾಗಿದೆ.

ಕಳೆದ ಮೂರ್ನಾಲ್ಕು ದಿನದಿಂದ ಕಲ್ಕೆರೆ ಮಂಜ ಶಿವಮೊಗ್ಗದಲ್ಲಿ ಓಡಾಡುತ್ತಿರುವ ಸುಳಿವು ಲಭಿಸಿತ್ತು. ಖಚಿತ ಮಾಹಿತಿ ಮೇರೆಗೆ ಇಂದು ಬೆಳಗ್ಗೆ ಪೊಲೀಸರು ಬಂಧಿಸಲು ತೆರಳಿದ್ದರು. ಈ ಸಂದರ್ಭ ಪೊಲೀಸ್‌ ಸಿಬ್ಬಂದಿ ದ್ಯಾಮಪ್ಪ ಅವರ ಮೇಲೆ ಮಂಜ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

Police-fire-on-Thief-at-Shivamogga-city

ಆತ್ಮರಕ್ಷಣೆಗಾಗಿ ಜಯನಗರ ಪಿಎಸ್‌ಐ ನವೀನ್‌ ಬ್ಯಾಕೋಡು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಬಳಿಕ ಕಲ್ಕೆರೆ ಮಂಜನ ಕಾಲಿಗೆ ಗುಂಡು ಹೊಡೆದಿದ್ದಾರೆ. ಮಂಜನ ಎಡಗಾಲಿಗೆ ಗುಂಡು ತಗುಲಿದೆ.

ಗಾಯಾಳು ಪೊಲೀಸ್‌ ಸಿಬ್ಬಂದಿ ದ್ಯಾಮಪ್ಪ ಮತ್ತು ಕಲ್ಕೆರೆ ಮಂಜನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

https://chat.whatsapp.com/JPJ0lTQsTKf365Fqu6Q7cd

ಇದನ್ನೂ ಓದಿ » ಶಿವಮೊಗ್ಗದ ಉಪನೋಂದಣಾಧಕಾರಿ ಕಚೇರಿ ಸ್ಥಳಾಂತರ, ಇಲ್ಲಿದೆ ಹೊಸ ವಿಳಾಸ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 6, 2025

Leave a Comment