ಯುವನಿಧಿ ಫಲಾನುಭವಿಗಳಿಗೆ ಮಹತ್ವದ ಅಪ್‌ಡೇಟ್‌, ತಪ್ಪಿದರೆ ನಿರುದ್ಯೋಗ ಭತ್ಯೆ ಕಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಯುವನಿಧಿ ಯೋಜನೆ ಅಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಫಲಾನುಭವಿಗಳು ಇನ್ಮುಂದೆ ಪ್ರತಿ ತಿಂಗಳು ಸ್ವಯಂ ಘೋಷಣೆ ನೀಡಬೇಕು. ಇಲ್ಲವಾದಲ್ಲಿ ನೇರ ನಗದು ಖಾತೆಗೆ ಜಮೆ ಆಗುವುದಿಲ್ಲ ಎಂದು ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆ ಮೂಲಕ ಯುವನಿಧಿ ಯೋಜನೆ ಅಡಿ ಪ್ರತಿ ನಿರುದ್ಯೋಗಿ ಭತ್ಯೆ ನೀಡಲಾಗುತ್ತಿದೆ. ಪದವಿಧರರಿಗೆ ₹3000 ಮತ್ತು ಡಿಪ್ಲೋಮಾ ಪದವೀದರರಿಗೆ ₹1500 ಹಣ ಖಾತೆಗೆ ನೇರ ನಗದು ಮೂಲಕ ವರ್ಗವಾಗುತ್ತಿದೆ.

ಇದನ್ನೂ ಓದಿ » ನಾಳೆ ಶಾಲೆ, ಕಾಲೇಜಿಗೆ ರಜೆ ಇಲ್ಲ, ಅಧಿಸೂಚನೆ ನಿಜವಲ್ಲ, ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಈವರೆಗು ಶಿವಮೊಗ್ಗ ಜಿಲ್ಲೆಯ ಫಲಾನುಭವಿಗಳು ತ್ರೈಮಾಸಿಕವಾಗಿ ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿದ್ದರು. ಇನ್ಮುಂದೆ ಪ್ರತಿ ತಿಂಗಳು 25ರೊಳಗೆ ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್‌ಗೆ ಲಾಗಿನ್ ಆಗಿ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದೂರವಾಣಿ ಸಂಖ್ಯೆ 9901914601 ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment