‘ಸಿಟಿ ಬಸ್‌ ನಿಷೇಧಿಸಿ, ಸರ್ಕಾರಿ ಬಸ್‌ ಆರಂಭಿಸಿ’, ನಾಗರಿಕರ ಆಕ್ರೋಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ರಾಗಿಗುಡ್ಡ ಸಮೀಪದ ಶಾಂತಿನಗರಕ್ಕೆ ಖಾಸಗಿ ಸಿಟಿ ಬಸ್‌ಗಳನ್ನು ನಿಷೇಧಿಸಬೇಕು. ಸಿಟಿ ಬಸ್ ಡಿಕ್ಕಿಯಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನ.16ರ ರಾತ್ರಿ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ನಡೆದ ಅಪಘಾತ ಖಾಸಗಿ ಬಸ್‌ಗಳ ಯಮಸ್ವರೂಪಿ ವೇಗಕ್ಕೆ ಸಾಕ್ಷಿಯಾಗಿದೆ. ಶಾಂತಿನಗರದ ಯುವಕ ಜೀವ ಕಳೆದುಕೊಂಡು, ಮೂರ್ನಾಲ್ಕು ಬೈಕ್ ಸವಾರರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರ್ಘಟನೆಗೆ ಖಾಸಗಿ ಸಿಟಿ ಬಸ್‌ಗಳ ಬೇಜವಾಬ್ದಾರಿತನ ಹಾಗೂ ಫ್ಲೈ ಓವರ್ ಬಳಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ಕಾರಣರಾಗಿದ್ದಾರೆ ಎಂದು ದೂರಿದರು.

ಬಸ್ ಮಾಲೀಕರು ಮತ್ತು ಗುತ್ತಿಗೆದಾರರಿಂದ ಯುವಕನ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು. ಶಾಂತಿನಗರಕ್ಕೆ ಖಾಸಗಿ ಸಾರಿಗೆ ಬಸ್ ನಿಷೇಧಿಸಿ ಸರ್ಕಾರಿ ನಗರ ಸಾರಿಗೆ ಬಸ್ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಯದ್ವಾತದ್ವ ಚಲಿಸಿದ ಸಿಟಿ ಬಸ್‌, ನವ ವಿವಾಹಿತ ಸಾವು, ಬೈಕುಗಳು ಜಖಂ

ವೇದಿಕೆ ಅಧ್ಯಕ್ಷ ಸೈಯದ್ ಮುಜೀಬುಲ್ಲಾ, ರಾಮು, ನಾಸೀರುದ್ದೀನ್, ಫಯಾಜ್‌ಖಾನ್‌, ಅಬ್ರಾ‌ರ್, ಪ್ರಸನ್ನ, ಜಬೀವುಲ್ಲಾ, ರಿಜ್ವಾನ್, ಅನ್ವ‌ರ್ ಪ್ರತಿಭಟನೆಯಲ್ಲಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 20, 2025

Leave a Comment