ಶಿವಮೊಗ್ಗದಲ್ಲಿ ಪೊಲೀಸರ ದಾಳಿ, ಸಾಗರದ ವ್ಯಕ್ತಿ ಅರೆಸ್ಟ್‌, ಕಾರಣವೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಗಾಂಜಾ ದಂಧೆಕೋರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಪೊಲೀಸರು, ಶಿವಮೊಗ್ಗಕ್ಕೆ ಗಾಂಜಾ ಸಪ್ಲೈ ಮಾಡುತಿದ್ದ ವ್ಯಕಿಯೊಬ್ಬನ ಹೆಡೆಮುರಿ (Arrested) ಕಟ್ಟಿದ್ದಾರೆ. ಆತನಿಂದ ಕೆ.ಜಿ.ಗಟ್ಟಲೆ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಸಾಗರ ಮೂಲದ ಅಲ್ತಾಫ್‌ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 4 ಕೆ.ಜಿ 30 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಇನ್ಸ್‌ಪೆಕ್ಟರ್‌ ರವಿ ಪಾಟೀಲ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹಳೆ ಮಂಡ್ಲಿ ಸಮೀಪದ ನಮೋ ಶಂಕರ ಲೇಔಟ್‌ ಬಳಿ ಅಲ್ತಾಫ್‌ನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಆತನನ್ನು ಬಂಧಿಸಲಾಗಿದೆ.

Police-Arrested-sagara-altaf-in-Shimoga

ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಬಾಬು ಅಂಜನಪ್ಪ, ಇನ್ಸ್‌ಪೆಕ್ಟರ್‌ ರವಿ ಪಾಟೀಲ್, ಸಬ್‌ ಇನ್ಸ್‌ಪೆಕ್ಟರ್‌ ನಾರಾಯಣ್ ಮಧುಗಿರಿ, ಸಿಬ್ಬಂದಿ ಸಂದೀಪ್, ಗುರುನಾಯ್ಕ್, ಗಣೇಶ್, ಪುನೀತ್, ಮನೋಹರ್, ಹಾಗು ಜಿಲ್ಲಾ ಸಿಡಿಆರ್‌ ವಿಭಾಗದ ಇಂದ್ರೇಶ್, ಗುರು ಪಾಲ್ಗೊಂಡಿದ್ದರು. ದೊಡ್ಡ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿರುವ ಸಿಬ್ಬಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment