ವಿನೋಬನಗರ ತರಕಾರಿ ಮಂಡಿ ಮುಂದೆ ಕೊಲೆ, ಕಾರಣವೇನು? ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ?

 ಶಿವಮೊಗ್ಗ  LIVE 

ಶಿವಮೊಗ್ಗ: ವಿನೋಬನಗರದ ತರಕಾರಿ ಮಂಡಿ ಬಳಿ 26 ವರ್ಷದ ಯುವಕನ ಹತ್ಯೆಯಾಗಿದೆ (Murder). ರಾಡ್‌ನಿಂದ ತಲೆಗೆ ಹೊಡೆದು ಕೊಲೆಗೈಯಲಾಗಿದೆ.

Vinobanagara-Incident-Police-visit-the-spot

ತರಕಾರಿ ಮಂಡಿ ಎದುರಿಗಿರುವ ಶ್ರೀನಿಧಿ ವೈನ್ಸ್‌ ಮಳಿಗೆ ಮುಂಭಾಗ ಇಂದು ಸಂಜೆ ಘಟನೆ ನಡೆದಿದೆ. ಅರುಣ್‌ (26) ಕೊಲೆಯಾದವನು.

ಹೇಗಾಯ್ತು ಘಟನೆ?

ವೈನ್ಸ್‌ ಶಾಪ್‌ ಮುಂದೆ ನಿಂತಿದ್ದ ಅರುಣ್‌ ಮೇಲೆ ಇಬ್ಬರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಡ್‌ನಿಂದ ಅರುಣ ತಲೆಗೆ ಹೊಡೆದಿದ್ದಾರೆ. ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿ ಅರುಣ್‌ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಅರುಣನ ಮೃತದೇಹವನ್ನು ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದರು.

Vinobanagara-Incident-Police-visit-the-spot

ಇದನ್ನೂ ಓದಿ » ಹೊಸ ವರ್ಷಾಚರಣೆ, ಶಿವಮೊಗ್ಗ ಪೊಲೀಸರಿಂದ ಮಹತ್ವದ ಮೀಟಿಂಗ್‌, 8 ಪಾಯಿಂಟ್‌ ಸೂಚನೆ, ಏನದು?

ಯಾರು ಈ ಅರುಣ್‌?

ಅರುಣ್‌, ಕಾಶಿಪುರದ ತಮಿಳು ಕ್ಯಾಂಪ್‌ನ ನಿವಾಸಿ. ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಕಳೆದ ಎರಡು ವರ್ಷದ ಹಿಂದೆ ಈತ ವಿವಾಹವಾಗಿದ್ದ. ಕೌಟುಂಬಿಕ ವಿಚಾರವಾಗಿ ವಿವಾದ ಉಂಟಾಗಿತ್ತು. ಇದುವೆ ಹತ್ಯೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಅರುಣ್‌ ಎಂಬಾತನ ಹತ್ಯೆಯಾಗಿದೆ. ಸಂಬಂಧಿಕರಿಂದಲೇ ಕೃತ್ಯ ನಡೆದಿರುವ ಶಂಕೆ ಇದೆ. ವೈವಾಹಿಕ ವಿವಾದದ ಹಿನ್ನೆಲೆ ಇಬ್ಬರು ಆರೋಪಿಗಳು ದಾಳಿ ನಡೆಸಿದ್ದಾರೆ. ಅವರನ್ನು ವಶಕ್ಕೆ ಪಡೆಯಲಾಗುತ್ತದೆ.ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ

ಸ್ಥಳದಲ್ಲಿ ಜಮಾಯಿಸಿದ ಜನ

ಇನ್ನು, ಘಟನಾ ಸ್ಥಳದಲ್ಲಿ ದೊಡ್ಡ ಸಂಖ್ಯೆಯ ಜನ ಜಮಾಯಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಡಿವೈಎಸ್‌ಪಿ ಸಂಜೀವ್‌ ಕುಮಾರ್‌, ವಿನೋಬನಗರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment