ಶಿವಮೊಗ್ಗ: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರೊಬ್ಬರ (Civic worker) ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಪಾಲಿಕೆಯ 29ನೇ ವಾರ್ಡ್‌ನಲ್ಲಿ ಕಸ ತುಂಬುವ ಕೆಲಸ ಮಾಡುವ ಆಂಜಿನಿ ಎಂಬುವವರು ಭಾನುವಾರ ಬೆಳಿಗ್ಗೆ ಲಕ್ಷ್ಮೀ ಟಾಕೀಸ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಂದೇ ಬೈಕ್‌ನಲ್ಲಿ ಬಂದ ನಾಲ್ವರು ಯುವಕರು ಸೌಂಡ್ ಬಾಕ್ಸ್‌ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಆಂಜಿನಿ ಅವರ ಪಕ್ಕದಲ್ಲೆ ಹೋಗಿದ್ದಾರೆ. ಹಾಗಾಗಿ ಆಂಜಿನಿ ಅವರು ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರು ಉರ್ದು ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ವಿದ್ಯಾನಗರ ಸೇತುವೆ ನಾಮಕರಣ ವಿಚಾರ, ಮುಖ್ಯಮಂತ್ರಿಗೆ ಪತ್ರ ಬರೆದ ಮಾಜಿ ಮಿನಿಸ್ಟರ್
ಇದನ್ನು ಪ್ರಶ್ನಿಸಿದ ಸಹೋದ್ಯೋಗಿ ರವಿಕಿರಣ್ ಅವರ ಎದುರೇ ಆಂಜಿನಿ ಅವರಿಗೆ ಮುಖ ಮತ್ತು ಮೈಕೈಗೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಇತರೆ ಕಾರ್ಮಿಕರು ಸ್ಥಳಕ್ಕೆ ಬರುವುದನ್ನು ಗಮನಿಸಿದ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಶಿವಮೊಗ್ಗದಲ್ಲಿ ಹಾಲಿನ ಪ್ಯಾಕೆಟ್ ಕಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

- KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು

- ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್ಸು, ಅದೃಷ್ಟವಶಾತ್ ಪ್ರಯಾಣಿಕರು ಪಾರು, ಆಗಿದ್ದೇನು?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 27 ಜನವರಿ 2026 | ಅಡಿಕೆ ಧಾರಣೆ

- ಶಿವಮೊಗ್ಗದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲು, ಜಿಲ್ಲಾಧಿಕಾರಿ, ಸಿಇಒ ಭೇಟಿ

About The Editor
ನಿತಿನ್ ಆರ್.ಕೈದೊಟ್ಲು






