ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಇಲ್ಲಿನ ಲಯನ್ ಸಫಾರಿ ಸಮೀಪ ಮುದ್ದಿನಕೊಪ್ಪದಲ್ಲಿ ಟಾಟಾ ಏಸ್ ಮತ್ತು ಪ್ಯಾಸೆಂಜರ್ ಆಟೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ (collision) ಮಗು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಎರಡು ವಾಹನಗಳ ಚಾಲಕರ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಮೀನು ಮಾರುಕಟ್ಟೆ ಬಳಿ ಕಿರಿಕ್, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?
ಸಾಗರದಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ, ಎದುರುಗಡೆಯಿಂದ ಅತಿವೇಗವಾಗಿ ಬಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ರಸ್ತೆಯ ಮೇಲೆ ಪಲ್ಟಿಯಾಗಿದ್ದು, ಟಾಟಾ ಏಸ್‌ನಲ್ಲಿದ್ದ ಅಬ್ದುಲ್ ರಹೀಂ ಮತ್ತು ಚಾಲಕ ರಾಹಿಲ್‌ಗೆ ಗಾಯಗಳಾಗಿವೆ. ಆಟೋದಲ್ಲಿದ್ದ ವಿದ್ಯಾಶ್ರೀ, ಅವರ ಮಗು ಕೃಪಾ ಸನ್ನಿಧಿ ಸೇರಿದಂತೆ ಇತರ ಪ್ರಯಾಣಿಕರಿಗೂ ಗಾಯವಾಗಿದೆ. ಇವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ಸಂಬಂಧ ಎರಡು ವಾಹನಗಳ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಕುಂಸಿ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
LATEST NEWS
- ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

- ಉಪನ್ಯಾಸಕ ಸುರೇಶ್ ನಿಗೂಢ ಸಾವು ಕೇಸ್, ಶಿವಮೊಗ್ಗ SP ಫಸ್ಟ್ ರಿಯಾಕ್ಷನ್, ಏನಂದ್ರು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

- ಟಾಟಾ ಏಸ್, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

- ಮೀನು ಮಾರುಕಟ್ಟೆ ಬಳಿ ಕಿರಿಕ್, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು














