ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020
ಸ್ಥಾಯಿ ಸಮಿತಿ ಸದಸ್ಯತ್ವ ಬೇಡವೇ ಬೇಡ ಅಂದರು..! ಚುನಾವಣೆ ಪ್ರಕ್ರಿಯೆ ಮುಗಿಯೋವರೆಗು ಮೌನವಾಗಿ ಕುಳಿತರು..! ವೇದಿಕೆ ಕೆಳಗೆ ನಿಂತು ವಿಷ್ ಮಾಡುತ್ತಿದ್ದವರನ್ನು ವೇದಿಕೆಗೆ ಎಳೆದೊಯ್ದ ನಿರ್ಗಮಿತ ಉಪ ಮೇಯರ್..!
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಅನಿತಾ ರವಿಶಂಕರ್, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗು ಮೌನಕ್ಕೆ ಶರಣಾಗಿದ್ದರು. ಮೇಯರ್ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಸುವರ್ಣ ಶಂಕರ್ ಅವರಿಗೆ ಪಕ್ಷ ಗ್ರೀನ್ ಸಿಗ್ನಲ್ ನೀಡಿತು. ಇದು ಅನಿತಾ ರವಿಶಂಕರ್ ಅವರಿಗೆ ಬೇಸರ ತರಿಸಿತ್ತು. ಹಾಗಾಗಿ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಚುನಾವಣೆಗಳು ನಡೆದ ಅವಧಿಯಲ್ಲಿ ಮೌನವಾಗಿಯೇ ಕುಳಿತಿದ್ದರು.
ಸ್ಥಾಯಿ ಸಮಿತಿಯು ಬೇಕಿಲ್ಲ
ಮೇಯರ್, ಉಪ ಮೇಯರ್ ಆಯ್ಕೆ ಬಳಿಕ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಿತು. ಒಂದೆರಡು ಸ್ಥಾಯಿ ಸಮಿತಿಗೆ ಸದಸ್ಯರಾಗುವಂತೆ ಅನಿತಾ ರವಿಶಂಕರ್ ಅವರಿಗೆ ಪಕ್ಷದ ಪಾಲಿಕೆ ಸದಸ್ಯರು ಕೇಳಿಕೊಂಡರು. ಅನಿತಾ ರವಿಶಂಕರ್ ಅವರ ಪಕ್ಕದಲ್ಲೇ ಕುಳಿತಿದ್ದ ನಿರ್ಗಮಿತ ಮೇಯರ್ ಲತಾ ಗಣೇಶ್ ಅವರು ಸ್ಥಾಯಿ ಸಮಿತಿಗೆ ಹೆಸರು ಬರೆಸುವಂತೆ ತಿಳಿಸಿದರು. ಆದರೆ ಅನಿತಾ ರವಿಶಂಕರ್ ಅವರು ಯಾವುದು ಬೇಡ ಎಂದು ತಲೆ ಆಡಿಸಿದರು.
ವೇದಿಕೆಗೆ ಎಳೆದೊಯ್ದು ವಿಷ್ ಮಾಡಿಸಿದರು
ಇನ್ನು, ನೂತನ ಮೇಯರ್ ಮತ್ತು ಉಪ ಮೇಯರ್’ಗೆ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿಯ ಪಾಲಿಕೆ ಸದಸ್ಯರು ಹೂವಿನ ಹಾರ ಹಾಕಿ, ಹೂಗುಚ್ಛ ನೀಡಿ ಶುಭ ಹಾರೈಸಿದರು. ಈ ವೇಳೆ ದೂರದಲ್ಲೇ ನಿಂತು ವೀಕ್ಷಿಸುತ್ತಿದ್ದ ಅನಿತಾ ರವಿಶಂಕರ್ ಅವರು, ಬಳಿಕ ವೇದಿಕೆ ಬಳಿ ಬಂದು ಶುಭ ಹಾರೈಸಿದರು. ಆದರೆ ನಿರ್ಗಮಿತ ಉಪ ಮೇಯರ್ ಚನ್ನಬಸಪ್ಪ ಅವರು, ಅನಿತಾ ರವಿಶಂಕರ್ ಅವರನ್ನು ವೇದಿಕೆಗೆ ಬರುವಂತೆ ಮನವಿ ಮಾಡಿದರು.
ಕೊನೆಗೆ ಚನ್ನಬಸಪ್ಪ ಅವರೆ ಅನಿತಾ ರವಿಶಂಕರ್ ಅವರನ್ನು ವೇದಿಕೆಗೆ ಕರೆದೊಯ್ದು ನಿಲ್ಲಿಸಿ, ನೂತನ ಮೇಯರ್, ಉಪ ಮೇಯರ್ ಜೊತೆಗೆ ನಿಲ್ಲಿಸಿ ಫೋಟೊ ಕ್ಲಿಕ್ಕಿಸಿದರು.
- ನಂಜಪ್ಪ ಆಸ್ಪತ್ರೆಯಲ್ಲಿ ಕ್ಯಾಪ್ಸುಲ್ ಎಂಡೋಸ್ಕೋಪಿ, ಏನಿದು? ಉಪಯೋಗವೇನು?
- ಗೃಹಲಕ್ಷ್ಮಿ ಯೋಜನೆ, ಮಹತ್ವದ ಅಪ್ಡೇಟ್ ನೀಡಿದ ಪ್ರಾಧಿಕಾರ, ಏನದು?
- ನೂರಾರು ಕನಸು ಹೊತ್ತಿದ್ದ ಯುವಕ ಹಾಸಿಗೆ ಹಿಡಿದ, ತುತ್ತು ಅನ್ನಕ್ಕು ಕುಟುಂಬದ ಪರದಾಟ
- ಅಡಿಕೆ ಧಾರಣೆ | 8 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮನೆ ಬಾಗಿಲು ತೆಗೆದಿತ್ತು, ಪತ್ನಿ ಇರಬೇಕೆಂದು ಒಳ ಬಂದ ವ್ಯಕ್ತಿಗೆ ಆಘಾತ ಕಾದಿತ್ತು, ಆಗಿದ್ದೇನು?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]