ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 4 ಫೆಬ್ರವರಿ 2020
ಕರ್ನಾಟಕ ಮತ್ತು ಮಧ್ಯಪ್ರದೇಶ ನಡುವೆ ಶಿವಮೊಗ್ಗದ ನವುಲೆಯಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್’ನ ಮೊದಲ ದಿನದ ಆಟ ಮುಗಿದಿದೆ. ದಿನದ ಅಂತ್ಯಕ್ಕೆ ಕರ್ನಾಟಕ ತಂಡ ಮೂರು ವಿಕೆಟ್ ನಷ್ಟಕ್ಕೆ 233 ರನ್ ಸ್ಕೋರ್ ಮಾಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೀಸನ್’ನ ಮೊದಲ ಸೆಂಚುರಿ
ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಊಟದ ವಿರಾಮಕ್ಕೆ ಮೊದಲು ಎರಡು ವಿಕೆಟ್ ಪತನವಾಗಿತ್ತು. ಸಂಜೆ ಟೀ ಬ್ರೇಕ್ ವೇಳೆಗೆ ಮೂರನೇ ವಿಕೆಟ್ ಕಳೆದುಕೊಂಡಿತ್ತು. ಈ ನಡುವೆ ಟೀ ಬ್ರೇಕ್ ಬಳಿಕ ಆಟದಲ್ಲಿ ಚುರುಕು ಕಾಣಿಸಿತು. ಕರ್ನಾಟಕ ತಂಡದ ರವಿಕುಮಾರ್ ಸಮರ್ಥ 105 ರನ್ ಸ್ಕೋರ್ ಮಾಡಿದ್ದಾರೆ. ರಣಜಿಯ ಈ ಸೀಸನ್’ನಲ್ಲಿ ಕರ್ನಾಟಕ ತಂಡದ ಪಾಲಿಗೆ ಇದು ಮೊದಲ ಸೆಂಚುರಿಯಾಗಿದೆ.
ಮೂರನೆ ಸೆಷನ್’ನಲ್ಲಿ ಭರ್ಜರಿ ಜೊತೆಯಾಟ
ರವಿಕುಮಾರ್ ಸಮರ್ಥ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ ಅವರ ಜೊತೆಯಾಟ, ಕರ್ನಾಟಕ ತಂಡದ ಸ್ಕೋರ್ ದುಪ್ಪಟ್ಟುಗೊಳಿಸಿದೆ. ಮೊದಲ ದಿನದ ಎರಡು ಸೆಷನ್’ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಕೋರ್ ಹೆಚ್ಚಳವಾಗಿರಲಿಲ್ಲ. ಟೀ ಬ್ರೇಕ್ ಬಳಿಕ ಈ ಜೋಡಿ 106 ರನ್ ಸ್ಕೋರ್ ಮಾಡಿದೆ.
ಬ್ಯಾಟ್ಸಮನ್’ಗಳು ಎಷ್ಟೆಷ್ಟು ಸ್ಕೋರ್ ಮಾಡಿದ್ದಾರೆ?
ದಿನದ ಅಂತ್ಯಕ್ಕೆ ಕರ್ನಾಟಕ ತಂಡದ ರವಿಕುಮಾರ್ ಸಮರ್ಥ 105, ಕೃಷ್ಣಮೂರ್ತಿ ಸಿದ್ಧಾರ್ಥ 62 ರನ್ ಗಳಿಸಿದ್ದಾರೆ. ದೇವದತ್ತ ಪಡಿಕ್ಕಲ್ ಶೂನ್ಯಕ್ಕೆ ಔಟ್ ಆದರೆ ರೋಹನ್ ಕದಂ 9, ಕುರುಣ್ ನಾಯರ್ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಮಧ್ಯಪ್ರದೇಶ ತಂಡ ಅರಂಭದಿಂದಲೂ ಕರ್ನಾಟಕದ ಬ್ಯಾಟ್ಸಮನ್’ಗಳ ರನ್ ಗಳಿಕೆಗೆ ಬ್ರೇಕ್ ಹಾಕುತ್ತಲೇ ಇದ್ದರು. ಮೊದಲ ಎರಡು ಸೆಷನ್’ನಲ್ಲಿ ರನ್ ಗಳಿಸಲು ಕರ್ನಾಟಕದ ಬ್ಯಾಟ್ಸ್’ಮನ್’ಗಳು ಹರಸಾಹಸ ಪಡಬೇಕಾಯ್ತು. ಆದರೆ ಮೂರನೆ ಸೆಷನ್’ನಲ್ಲಿ ರವಿಕುಮಾರ್ ಸಮರ್ಥ, ಕೃಷ್ಣಮೂರ್ತಿ ಸಿದ್ಧಾರ್ಥ ಜೊತೆಯಾಟ, ಮಧ್ಯಪ್ರದೇಶದ ಆಟಗಾರರ ಬೆವರಳಿಸಿತು.
18 ಓವರ್ ಮಾಡಿದ್ದ ಕುಮಾರ್ ಕಾರ್ತಿಕೇಯ 52 ರನ್ ನೀಡಿದರು, ಗೌರವ್ ಯಾದವ್ 19 ಓವರ್ (29 ರನ್), ರವಿ ಯಾದವ್ 14 (45), ಕುಲ್ದೀಪ್ ಸೆನ್ 17 (30), ವೆಂಕಟೇಶ್ ಐಯ್ಯರ್ 14 (24), ಶುಭಂ ಶರ್ಮಾ 3 (12), ರಮ್ಜೀನ್ ಖಾನ್ 1 (9) ಓವರ್ ಮಾಡಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]