ಶಿವಮೊಗ್ಗ ಲೈವ್.ಕಾಂ | SHIMOGA | 7 ಫೆಬ್ರವರಿ 2020

ಶಿವಮೊಗ್ಗ ನಗರದ ತುಂಗಾ ಸೇತುವೆ ಮೇಲೆ ಬೈಕ್ ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ. ಮತ್ತೊಬ್ಬ ಸವಾರನ ಸ್ಥಿತಿ ಗಂಭೀರವಾಗಿದೆ.
ಓತಿಘಟ್ಟದ ರವಿ (44) ಮೃತರು. ರವಿ ಅವರ ಸಂಬಂಧಿ ಯೋಗೇಶ್ ಎಂಬವವರು ಗಾಯಗೊಂಡಿದ್ದಾರೆ. ಅವರ ತೊಡೆಯ ಭಾಗಕ್ಕೆ ಗಯವಾಗಿದೆ. ಯೋಗೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆಎಸ್ಆರ್’ಟಿಸಿ ಬಸ್ ಶಿವಮೊಗ್ಗದ ಬಸ್ ನಿಲ್ದಾಣದ ಕಡೆಗೆ ತೆರಳುತ್ತಿತ್ತು. ರವಿ ಮತ್ತು ಯೋಗೇಶ್ ಅವರು ಶಿವಮೊಗ್ಗದಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ತುಂಗಾ ನದಿ ಹಳೆ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ಕೆಎಸ್ಆರ್’ಟಿಸಿ ಬಸ್ ಬಿ.ಹೆಚ್.ರಸ್ತೆಯಿಂದ ಹೊಸ ಸೇತುವೆ ಕಡೆಗೆ ಬರುತ್ತಿತ್ತು. ಬೈಕ್ ಸವಾರರು ಹೊಸ ಸೇತುವೆ ಮೇಲೆ ಚಲಿಸುತ್ತಿದ್ದರು. ಎದುರಿನಿಂದ ದಿಢೀರ್ ಬಸ್ಸು ಬಂದಿದ್ದರಿಂದ ಬ್ರೇಕ್ ಹಾಕಲು ಆಗಲಿಲ್ಲ.
ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
