ನಮಗೆ ನೀವೆ ಗಣ್ಯರು
ಲಿಂಕ್ ಕ್ಲಿಕ್ ಮಾಡಿ ಇದನ್ನು ಓದುತ್ತಿರುವ ನೀವೆ ನಮ್ಮ ಹೊಸ ಅಂಕಣಗಳ ಉದ್ಘಾಟಕರು. ನಿಮ್ಮ ಹಾರೈಕೆ, ಸಲಹೆಗಳಿರಲಿ.
ಎಲ್ಲರಿಗು ಸಂಕ್ರಾಂತಿ ಹಬ್ಬದ ಶುಭಾಶಯಗಳು
SHIVAMOGGA LIVE NEWS
SHIMOGA : ಶಿವಮೊಗ್ಗ ಲೈವ್.ಕಾಂ ವೆಬ್ ಸೈಟ್ (website) ಲಕ್ಷ ಲಕ್ಷ ಓದುಗರನ್ನು ತಲುಪುತ್ತಿದೆ. ಪ್ರತಿ ತಿಂಗಳು ಜಗತ್ತಿನಾದ್ಯಂತ ಮಿಲಿಯನ್ ಗಟ್ಟಲೆ ಸರ್ತಿ ಓಪನ್ ಆಗುತ್ತಿದೆ. ಆನ್ ಲೈನ್ ಮಾಧ್ಯಮವೊಂದು ಇಷ್ಟು ಕಡಿಮೆ ಅವಧಿಯಲ್ಲಿ, ಮಿಲಿಯನ್ ವಿವ್ಸ್ ಪಡೆಯುವುದು ಸಣ್ಣ ಸಂಗತಿಯಲ್ಲ. ಈವರೆಗು ಶಿವಮೊಗ್ಗ ಲೈವ್.ಕಾಂನಲ್ಲಿ ನಾವೆಲ್ಲ ಸುದ್ದಿಯನ್ನಷ್ಟೆ ಓದುತ್ತಿದ್ದೆವು. ಈ ಸಂಕ್ರಾಂತಿ ಬಳಿಕ ನಾವು ಸುದ್ದಿಯ ಜೊತೆ ಜೊತೆಗೆ ಹೊಸ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದರ ಮೊದಲ ಕಂತು ಇಲ್ಲಿದೆ. (website)
ಮೇಡ್ ಇನ್ ಶಿವಮೊಗ್ಗ
ಶಿವಮೊಗ್ಗ

ಜಿಲ್ಲೆಯ ಉದ್ಯಮ ಕ್ಷೇತ್ರ ಜಗತ್ತಿನಾದ್ಯಂತ ಸೇವೆ ಒದಗಿಸುತ್ತಿದೆ. ನಮ್ಮೂರಿನ, ನಮ್ಮೂರಿನವರು ಸ್ಥಾಪಿಸಿರುವ ಕಾರ್ಖಾನೆ, ಉತ್ಪನ್ನಗಳ ಪರಿಚಯ ಮಾಡಿಸುವ ಕಾರ್ಯವೆ ಮೇಡ್ ಇನ್ ಶಿವಮೊಗ್ಗ. ನಮ್ಮೂರ ಉತ್ಪನ್ನಗಳನ್ನು ಬಳಸೋಣ. ನಮ್ಮೂರಲ್ಲಿ ಉತ್ಪಾದನೆಯಾದ ವಸ್ತುಗಳು ಜಗತ್ತಿನಾದ್ಯಂತ ತಲುಪುತ್ತಿರುವುದನ್ನು ತಿಳಿಯುವ ಉದ್ದೇಶದಿಂದ ಈ ಅಂಕಣ ಆರಂಭಿಸಿದ್ದೇವೆ. ಪ್ರತಿ ಸೋಮವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ.
ಶಾಪಿಂಗ್ ಸೆಂಟರ್
ಎಲ್ಲಾ

ಮಹಾನಗರಿಗಳಂತೆ ಶಿವಮೊಗ್ಗಕ್ಕು ಮಾಲ್ ಮತ್ತು ಶಾಪಿಂಗ್ ಸಂಸ್ಕೃತಿ ದಾಂಗುಡಿ ಇಟ್ಟಿದೆ. ಹಾಗಾಗಿ ಸಣ್ಣದೊಂದು ವಸ್ತು ಕೊಳ್ಳಲು ಕೂಡ ಶಿವಮೊಗ್ಗದಲ್ಲಿ ಹಲವು OPTIONSಗಳಿವೆ. OPTIONS ಇದ್ದಾಗ ಗೊಂದಲ ಸಹಜ.ಇದೆ ಕಾರಣಕ್ಕೆ ನಾವು ಒಂದಷ್ಟು ವಿಭಿನ್ನ, ವಿಶೇಷ ಅನಿಸುವ ಶಾಪಿಂಗ್ ಸ್ಪಾಟ್ ಗಳನ್ನು ಪರಿಚಯ ಮಾಡುತ್ತೇವೆ. ಆಸಕ್ತಿ ಇದ್ದರೆ ಜನರು ಅಲ್ಲಿಗೆ ಭೇಟಿ ನೀಡಬಹುದು, ಇಷ್ಟವಾದರೆ ವಸ್ತುಗಳನ್ನು ಕೊಳ್ಳಬಹುದು. ನಾವು ತೋರಿಸುವ ಶಾಪಿಂಗ್ ಸೆಂಟರ್ ಗಳೆ ಅಂತಿಮವಲ್ಲ. ಯಾಕೆಂದರೆ ಗ್ರಾಹಕರಿಗೆ OPTIONS ಇವೆ. ಪ್ರತಿ ಮಂಗಳವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ.
ನೋಡಿ ಸ್ವಾಮಿ ನಾವಿರೋದು ಹೀಗೆ
ಇದು ನಟ

ಶಂಕರ್ ನಾಗ್ ಅವರ ಸಿನಿಮಾದ ಟೈಟಲ್. ಇದಕ್ಕೆ ಹೋಲುವ ಹಲವರು ನಮ್ಮ ನಡುವೆ ಇದ್ದಾರೆ. ಜನರ ಮಾತುಗಳಿಗೆ ಕ್ಯಾರೆ ಅನ್ನದೆ, ತಮ್ಮಿಷ್ಟದ ಕೆಲಸಗಳನ್ನು ಮಾಡುತ್ತ ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂತಹ ವಿಭಿನ್ನ ವ್ಯಕ್ತಿತ್ವದ ಜನರನ್ನು ಪರಿಚಯಿಸಿ, ಅವರಿಂದ ಸಮಾಜಕ್ಕೆ ಆಗಿರುವ, ಆಗುತ್ತಿರುವ ಉಪಯೋಗವನ್ನು ತಿಳಿಸುವ ಪ್ರಯತ್ನ. ಪ್ರತಿ ಬುಧವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ.
ದೈವ ಸನ್ನಿಧಿ
ಗುಡಿ, ಚರ್ಚು,

ಮಸೀದಿಗಳು ಮನಸಿಗೆ ನೆಮ್ಮದಿ ನೀಡುವ ಪ್ರಶಾಂತ ಸ್ಥಳ. ನಮ್ಮೂರಿನಲ್ಲಿ ಹಲವು ಪುರಾಣ ಪ್ರಸಿದ್ಧ, ಐತಿಹಾಸಿಕ ಮಂದಿರಗಳಿವೆ. ಅವುಗಳ ವಿಶೇಷತೆಗಳನ್ನು ಜನತೆಗೆ ತಿಳಿಸುವ ವಿಭಿನ್ನ ಪ್ರಯತ್ನ ಈ ಅಂಕಣ. ನಿಮ್ಮೂರಿನ ಮಂದಿರ, ಮಸೀದಿ, ಚರ್ಚುಗಳ ಬಗ್ಗೆಯು ಈ ಅಂಕಣದಲ್ಲಿ ಪ್ರಕಟಿಸಲು ಅವಕಾಶವಿದೆ. ಪ್ರತಿ ಗುರುವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ.
ಶಿವಮೊಗ್ಗ ಟೂರಿಸಂ
ಪಶ್ಚಿಮ

ಘಟ್ಟದ ಮಡಿಲು, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ. ಪ್ರವಾಸಿ ತಾಣಗಳಿಗೇನು ಕಡಿಮೆ ಇಲ್ಲ. ಐದಾರು ಕಿಲೋ ಮೀಟರ್ ಗೆ ಒಂದು ಪ್ರವಾಸಿ ತಾಣ ಸಿಗಲಿದೆ. ಇಲ್ಲಿಗೆಲ್ಲ ಕುಟುಂಬ ಸಹಿತ, ಸ್ನೇಹಿತರ ಜೊತೆಗೆ ಬಂದು ಪರಿಸರಕ್ಕೆ ಹಾನಿ ಉಂಟು ಮಾಡದಂತೆ ಸಮಯ ಕಳೆಯಲು ಅವಕಾಶವಿದೆ. ಇಂತಹ ರಮಣೀಯ ತಾಣಗಳನ್ನು ಜನರಿಗೆ ತಿಳಿಸುವುದು ಈ ಅಂಕಣದ ಉದ್ದೇಶ. ಪ್ರತಿ ಶುಕ್ರವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ.
ನಂಬರ್ ಗಳಲ್ಲಿ ನಮ್ಮೂರು
ಶಿವಮೊಗ್ಗ

ಜಿಲ್ಲೆ ಹಲವು ಹಿರಿಮೆಗಳ ತವರು. ನಂಬರ್ ಗಳ ಮೂಲಕವೆ ಈ ಹಿರಿಮೆಯನ್ನು ಪರಿಚಯಿಸುವ ವಿಭಿನ್ನ ಅಂಕಣ ನಂಬರ್ ಗಳಲ್ಲಿ ನಮ್ಮೂರು. ಇದನ್ನು ಇಲ್ಲಿ ವಿವರಿಸುವುದಕ್ಕಿಂತಲು ಅಂಕಣಗಳನ್ನು ಓದಿದರೆ ಹೆಮ್ಮಯಿಂದ ಬೀಗುವಂತೆ ಆಗಲಿದೆ. ಪ್ರತಿ ಶನಿವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ.
ಸೋಷಿಯಲ್ ಮೀಡಿಯಾ
ಈ ಜಗತ್ತು

ಈಗ ‘ಗ್ಲೋಬಲ್ ವಿಲೇಜ್’. ಅದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು. ಸೋಷಿಯಲ್ ಮೀಡಿಯಾಗಳು ಪ್ರಭಾವಶಾಲಿಗಳಾಗಿ ವರ್ಷಗಳೆ ಕಳೆದಿವೆ. ಇವುಗಳ ಮೂಲಕವು ಸ್ಟಾರ್ ಗಳು ಹುಟ್ಟಿಕೊಂಡಿದ್ದಾರೆ. ಸದ್ಯ ನಾವು ದೂರದ ಯಾವುದೋ ಊರಿನಲ್ಲಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಗಳನ್ನು ಕಂಡು ಪುಳಕಿತರಾಗುತ್ತಿದ್ದೇವೆ. ಆದರೆ ನಮ್ಮೂರಿನ ಹಲವರು ಈ ಜಾಲತಾಣಗಳ ಮೂಲಕ ಚಮತ್ಕಾರಗಳನ್ನು ಸೃಷ್ಟಿಸುತ್ತಿದ್ದಾರೆ. ಅಂತಹವರನ್ನು ಪರಿಚಯ ಮಾಡಿಕೊಡುವ ಅಂಕಣವೆ ಈ ಸೋಷಿಯಲ್ ಮೀಡಿಯಾ. ಪ್ರತಿ ಭಾನುವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ.
ಇದಿಷ್ಟೆ ಅಲ್ಲ..
ಶಿವಮೊಗ್ಗ ಲೈವ್.ಕಾಂ ವೆಬ್ ಸೈಟಿನಲ್ಲಿ ಈತನಕ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನಷ್ಟೆ ಓದಿದ್ದೇವೆ. ಇನ್ಮುಂದೆ ಹಲವು ವಿಭಿನ್ನ ವಿಚಾರಗಳನ್ನು ತಿಳಿಯೋಣ. ಮೊದಲ ಕಂತಿನಲ್ಲಿ ದಿನಕ್ಕೆ ಒಂದರಂತೆ 7 ಹೊಸ ಅಂಕಣ ಆರಂಭವಾಗುತ್ತಿದೆ. ಸದ್ಯದಲ್ಲೆ ಎರಡನೆ ಕಂತಿನ ಅಂಕಣಗಳು ಆರಂಭವಾಗಲಿದೆ. ಅವುಗಳು ನಿಮಗೆ ಇನ್ನಷ್ಟು ಆಪ್ತ, ಮತ್ತಷ್ಟು ಖುಷಿ, ನಾವು ಶಿವಮೊಗ್ಗದವರು ಎಂದು ಜಗದೆದುರು ಇನ್ನಷ್ಟು ಹೆಮ್ಮೆಯಿಂದ ಬೀಗುವಂತೆ ಮಾಡಲಿದೆ. ಇದಕ್ಕೆಲ್ಲ ನಿಮ್ಮ ನೆರವು, ಸಹಕಾರ ಅಗತ್ಯ. ನಿಮ್ಮೂರಿನಲ್ಲಿಯು ಇಂತಹ ವಿಶೇಷಗಳಿದ್ದರೆ ತಿಳಿಸಿ.
ನಮ್ಮ ಈ ಮೇಲ್ ಐಡಿ – [email protected]
ನಮ್ಮ ಮೊಬೈಲ್ ನಂಬರ್ – 9964634494
ನಮ್ಮ ವಾಟ್ಸಪ್ ಸಂಖ್ಯೆ – 7411700200
ALSO CLICK AND READ | About Shivamogga Live Website
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
[email protected]
» Whatsapp Number
7411700200
