ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 8 ಮೇ 2020
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಡೆಮೊ ಸೀಲ್ ಡೌನ್ನಿಂದಾಗಿ ಆತಂಕಕ್ಕೀಡಾಗಿದ್ದ ಬಡಾವಣೆಗಳಲ್ಲಿ ಇವತ್ತು ಬಿಗ್ ರಿಲೀಫ್ ಸಿಕ್ಕಿದೆ. ಬೆಳಗ್ಗೆಯಿಂದ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸೀಗೆಹಟ್ಟಿ, ಭಾರತಿ ಕಾಲೋನಿ, ಸಿದ್ದಯ್ಯ ರಸ್ತೆ, ಆರ್.ಎಂ.ಎಲ್ ನಗರದಲ್ಲಿ ಸುತ್ತಮುತ್ತ ಬಡಾವಣೆಗಳಲ್ಲಿ ಗುರುವಾರ ಸಂಜೆ ಡೆಮೊ ಸೀಲ್ ಡೌನ್ ಮಾಡಲಾಗಿತ್ತು. ಇದರಿಂದ ಶಿವಮೊಗ್ಗದಲ್ಲಿ ಆತಂಕ ಹುಟ್ಟಿತ್ತು. ಆದರೆ ಇವತ್ತು ಬೆಳಗ್ಗೆಯಿಂದ ಈ ಬಡಾವಣೆಯಲ್ಲಿ ರಿಲೀಫ್ ನೀಡಲಾಗಿತ್ತು.
ಅಂಗಡಿಗಳು ಓಪನ್, ಜನ ಸಂಚಾರ ನಾರ್ಮಲ್
ಬೆಳಗ್ಗೆಯಿಂದಲೇ ಈ ಬಡಾವಣೆಗಳಲ್ಲಿ ಅಂಗಡಿಗಳ ಬಾಗಿಲು ತೆಗೆಯಲಾಗಿತ್ತು. ಜನ ಸಂಚಾರವು ಸಾಮಾನ್ಯ ರೀತಿಯಲ್ಲಿ ಇತ್ತು. ತರಕಾರಿ ಗಾಡಿಗಳು, ವಾಹನ ಸಂಚಾರ ಎಂದಿನಂತೆ ಇದೆ.
ದೂರಾಯ್ತು ಆತಂಕ
ಡೆಮೊ ಸೀಲ್ ಡೌನ್ನಿಂದಾಗಿ ಶಿವಮೊಗ್ಗದಲ್ಲಿ ಆತಂಕ ಮೂಡಿತ್ತು. ಆದರೆ ಇವತ್ತು ಈ ಬಡಾವಣೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ, ಭಯ ದೂರಾಗಿದೆ. ಅಲ್ಲದೆ ವದಂತಿಗಳಿಗೂ ಬ್ರೇಕ್ ಬಿದ್ದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]