ಶಿವಮೊಗ್ಗ ಲೈವ್.ಕಾಂ | 20 ಏಪ್ರಿಲ್ 2019
ಬಿಜೆಪಿ ಅಭ್ಯರ್ಥಿ ಪರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರೋಡ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಮಿತ್ ಷಾ ಅವರು, ಸುಮಾರು ಒಂದು ಗಂಟೆ ಅವಧಿಯ ರೋಡ್ ಶೋ ಮಾಡಿದರು.
ಭದ್ರಾವತಿಯ ಅಂಬೇಡ್ಕರ್ ವೃತ್ತಕ್ಕೆ ಆಗಮಿಸುತ್ತಿದ್ದಂತೆ, ಶಾಸಕ ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭಾಷಣ ಮಾಡಿದರು. ಬಳಿಕ ಭಾಷಣ ಆರಂಭಿಸಿದ ಅಮಿತ್ ಷಾ, ಮೂರೇ ನಿಮಿಷದಲ್ಲಿ ಮುಗಿಸಿದರು.
ಮೂರು ನಿಮಿಷದಲ್ಲಿ ಅಮಿತ್ ಷಾ ಹೇಳಿದ್ದೇನು?
ರಾಘವೇಂದ್ರ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡುವುದಷ್ಟೇ ಈ ಚುನಾವಣೆಯ ಉದ್ದೇಶವಲ್ಲ. ಮೋದಿ ಅವರನ್ನು ಪ್ರಧಾನಿ ಮಾಡಲು ರಾಘವೇಂದ್ರ ಅವರನ್ನು ಆಯ್ಕೆ ಮಾಡಬೇಕಿದೆ. ದೇಶವನ್ನು ಸುರಕ್ಷಿತಗೊಳಿಸಬೇಕಿದೆ. ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಅದಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ. ನಾನೂ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನ ಚುನಾವಣೆಗೂ ಪ್ರಚಾರ ನಡೆಸಬೇಕಿದೆ. ಆದರೆ ರಾಘವೇಂದ್ರ ಅವರನ್ನು ಗೆಲ್ಲಿಸಲು ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಅಂತಾ ಚುಟುಕು ಭಾಷಣ ಮಾಡಿದರು.

ರಾಘವೇಂದ್ರ ಪರ ಘೋಷಣೆಯೋ ಘೋಷಣೆ
ರೋಡ್ ಶೋ ಉದ್ದಕ್ಕೂ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ಭಾಷಣದ ವೇಳೆಯಲ್ಲೂ ರಾಘವೇಂದ್ರ ಪರವಾಗಿ ಘೋಷಣೆ ಕೇಳಿ ಬಂತು. ಇನ್ನು, ಅಮಿತ್ ಷಾ ಅವರು ಭಾಷಣದ ವೇಳೆ, ರಾಘವೇಂದ್ರ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆ, ಕಾರ್ಯಕರ್ತರು ಘೋಷಣೆ ಕೂಗಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]