ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 19 ಮಾರ್ಚ್ 2019
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ವಾಹನಗಳ ತಪಾಸಣೆ ವೇಳೆ, ಚೆಕ್’ಪೊಸ್ಟ್ ಒಂದರಲ್ಲಿ ಹತ್ತು ಲಕ್ಷ ರುಪಾಯಿ ಹಣ ಪತ್ತೆಯಾಗಿದೆ. ಕಾರು ತಪಾಸಣೆ ವೇಳೆ ಬ್ಯಾಗ್’ನಲ್ಲಿ ಹಣವಿರುವುದು ಪತ್ತೆಯಾಗಿದೆ. ಚೆಕ್ ಪೋಸ್ಟ್ ಸಿಬ್ಬಂದಿ, ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿಕಾರಿಪುರದ ಅತ್ತಿಬೈಲು ಚೆಕ್’ಪೋಸ್ಟ್’ನಲ್ಲಿ ವಾಹನಗಳ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಹಿರೇಕೆರೂರು ತಾಲೂಕಿನ ಮಳವಳ್ಳಿ ಗ್ರಾಮದ ಕೊಟ್ರೇಶಪ್ಪ ಎಂಬುವವರ ಮಾರತಿ ಕಾರಿನಲ್ಲಿ ಹಣ ಸಿಕ್ಕಿದೆ. ಶಿವಮೊಗ್ಗದ ಆಕ್ಸಿಸ್ ಬ್ಯಾಂಕ್’ನಿಂದ ಹಣ ಬಿಡಿಸಿಕೊಂಡಿರುವುದಾಗಿ, ಕೊಟ್ರೇಶಪ್ಪ ಅಧಿಕಾರಿಗಳಿಗೆ ದಾಖಲೆ ಒದಗಿಸಿದ್ದಾರೆ.
ಹತ್ತು ಲಕ್ಷ ರೂಪಾಯಿ ದೊಡ್ಡ ಮೊತ್ತವಾಗಿದ್ದು, ಹೆಚ್ಚುವರಿಗೆ ದಾಖಲೆ ಪರಿಶೀಲನೆಗೆ ಹಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿದೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ಜಿಲ್ಲೆಯ ಒಳಗೆ ಮತ್ತು ಹೊರಗೆ ಹೋಗುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ 27 ಚೆಕ್’ಪೋಸ್ಟ್ ಸ್ಥಾಪಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]