ಶಿವಮೊಗ್ಗ ಲೈವ್.ಕಾಂ | SHIMOGA | 20 ಮಾರ್ಚ್ 2020
ಹಾಡು ಹಾಕಿಕೊಂಡು, ಶಿವಮೊಗ್ಗ ಪೊಲೀಸರಿಗೆ ಬೆದರಿಕೆ ಹಾಕಿ, ವಿಡಿಯೊ ರೆಕಾರ್ಡ್ ಮಾಡಿ, ಅದನ್ನು ವೈರಲ್ ಮಾಡಿದ್ದ ಮೂವರು ಈಗ ಜೈಲು ಪಾಲಾಗಿದ್ದಾರೆ.

ಶಿವಮೊಗ್ಗದ ಸೂಳೇಬೈಲ್’ನ ಶಾರು ಅಲಿಯಾಸ್ ಶೇಖ್ ಅಹಮದ್ (25), ಮಹಮದ್ ನೂರುಲ್ಲಾ ಅಲಿಯಾಸ್ ಕೋಳಿ (20), ರಾಗಿಗುಡ್ಡದ ಇಮ್ರಾನ್ ಖಾನ್ ಅಲಿಯಾಸ್ ಇಮ್ರಾನ್ (32) ಬಂಧಿತರು. ಇವರಿಂದ ಮಾರಕಾಸ್ತ್ರ, ಪಿಸ್ತೂಲು ಮಾದರಿಯ ಏರ್ ಗನ್ ವಶಕ್ಕೆ ಪಡೆಯಲಾಗಿದೆ.
ಪೊಲೀಸರಿಗೆ ಆವಾಜ್ ಹಾಕಿದ್ದ ವಿಡಿಯೋ ವೈರಲ್
ಸಿನಿಮಾ ಒಂದರ ಹಾಡು ಹಾಕಿಕೊಂಡು, ಡಾನ್ಸ್ ಮಾಡಿದ್ದ ಮೂವರು, ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ್ದರು. ಅಲ್ಲದೆ ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿಗಳ ಹೆಸರು ಹೇಳಿ ಬೆದರಿಕೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದರು. ಈ ಮೂವರ ಪೈಕಿ ಶಾರು ವಿರುದ್ಧ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 16ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಈ ಮೂವರ ಬಂಧನಕ್ಕೆ ರೌಡಿ ನಿಗ್ರಹ ಪಡೆ ಇನ್ಸ್’ಪೆಕ್ಟರ್ ಕೆ.ಟಿ.ಗುರುರಾಜ್ ಮತ್ತು ಮಹಿಳಾ ಠಾಣೆ ಇನ್ಸ್’ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡ ರಚಿಸಲಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]