ಶಿವಮೊಗ್ಗ ಲೈವ್.ಕಾಂ | 9 ಮಾರ್ಚ್ 2019
ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಅಂತಾ, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ವಂಚಕರು, ಜಿಲ್ಲೆಯ ಇಬ್ಬರ ಅಕೌಂಟ್’ನಿಂದ ಒಂದು ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದಾರೆ.
ಕೇಸ್ 1
ಶಿವಮೊಗ್ಗದ ಹೊಸಮನೆ ಬಡಾವಣೆಯ ಸೌಮ್ಯ ನಾಯಕಿ ಎಂಬುವವರಿಗೆ ಕರೆ ಮಾಡಿದ ವಂಚಕನೊಬ್ಬ, ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಸೌಮ್ಯ ಅವರ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ನವೀಕರಣ ಮಾಡಬೇಕಿದೆ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ಸೌಮ್ಯ, ಎಟಿಎಂ ಕಾರ್ಡ್ ನಂಬರ್ ನೀಡಿದ್ದಾರೆ. ಕೆಲವೇ ಕ್ಷಣದಲ್ಲಿ ಅವರ ಅಕೌಂಟ್’ನಿಂದ 50 ಸಾವಿರ ರೂಪಾಯಿ, ಆನ್’ಲೈನ್ ಮೂಲಕ ಡ್ರಾ ಮಾಡಿಕೊಳ್ಳಲಾಗಿದೆ.

ಕೇಸ್ 2
ಮತ್ತೊಂದು ಪ್ರಕರಣದಲ್ಲಿ ತೀರ್ಥಹಳ್ಳಿಯ ಶಿವಾನಂದ ಎಂಬುವವರಿಗೆ ಕರೆ ಮಾಡಿದ ವಂಚಕ, ಎಟಿಎಂ ಕಾರ್ಡ್ ಬ್ಲಾಕ್ ಆಗಲಿದೆ ಎಂದು ನಂಬಿಸಿದ್ದಾನೆ. ಅವರಿಂದ ಎಟಿಎಂ ಕಾರ್ಡ್ ನಂಬರ್ ಪಡೆದುಕೊಂಡಿದ್ದಾನೆ. ಕೆಲವೇ ಹೊತ್ತಲ್ಲಿ ಶಿವಾನಂದ ಅವರ ಖಾತೆಯಿಂದ, 64,996 ರೂಪಾಯಿಯನ್ನು ದೋಚಿದ್ದಾನೆ.
ವಂಚನೆ ವಿರುದ್ಧ ಪ್ರತ್ಯೇಕವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]