ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019
ಪ್ರಯಾಣಿಕರ ಚಿನ್ನಾಭರಣದ ಬ್ಯಾಗನ್ನು ಕದ್ದು ಸಾಗಿಸಿದ್ದ ಆಟೊ ಚಾಲಕನನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 159 ಗ್ರಾಂ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬ್ಬಲಗೆರೆಯ ಬಸವನಗೌಡ (44) ಬಂಧಿತ ಆರೋಪಿ. ನ.4ರಂದು ಎನ್.ಟಿ.ರಸ್ತೆ 7ನೇ ತಿರುವು ವಾಸಿಗಳಾದ ಇಬ್ಬರು ಮಹಿಳೆಯರು ಬಸ್ ನಿಲ್ದಾಣದಿಂದ ತಮ್ಮ ಮನೆಗೆ ಬಸವನಗೌಡನ ಆಟೊದಲ್ಲಿ ಪ್ರಯಾಣಿಸಿದ್ದರು. ತುಂಬ ಬ್ಯಾಗ್’ಗಳಿದ್ದ ಕಾರಣ ಆಟೊದಲ್ಲಿ ಬರುವಾಗ ಚಾಲಕನ ಬಳಿ ಒಡವೆಯ ಬ್ಯಾಗನ್ನು ಇಟ್ಟುಕೊಳ್ಳುವಂತೆ ಕೊಟ್ಟಿದ್ದರು.
ಮನೆ ಬಳಿ ಬಂದು ಎಲ್ಲ ಬ್ಯಾಗ್ಗಳನ್ನು ಇಳಿಸಿಕೊಂಡು ಮನೆ ಒಳಗೆ ಹೋಗಿ ಹೊರ ಬರುವಷ್ಟರಲ್ಲಿ ಆತ ಒಡವೆ ಬ್ಯಾಗ್ ನೊಂದಿಗೆ ನಾಪತ್ತೆಯಾಗಿದ್ದ. ಆತನಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಹಾಗಾಗಿ ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ಬೆನ್ನತ್ತಿ ಹೋದ ಪೊಲೀಸರು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ ಒಡವೆ ಜತೆಗೆ ಆಟೊರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
