ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019
ಧರ್ಮಶ್ರೀ ಸೇವಾ ಟ್ರಸ್ಟ್ನಿಂದ ಜ.30ಕ್ಕೆ ಶಿವಮೊಗ್ಗದಲ್ಲಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪುತ್ರಿ ಶಮಾಕಾ ಸಹ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಸಾಗರ ರಸ್ತೆಯ ಪ್ರೇರಣಾ ಕನ್ವೆನ್ಸನ್ ಹಾಲ್ನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿದ್ದು, ಆಯನೂರು ಪುತ್ರಿ ವಿವಾಹದ ಜತೆ 101 ಜೋಡಿ ನವಜೀವನ ಪ್ರವೇಶಿಸಬೇಕು ಎಂಬುದು ನಮ್ಮ ಆಶಯ ಎಂದು ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.30ರೊಳಗೆ ಹೆಸರು ನೋಂದಾಯಿಸಿ
ಸಾಮೂಹಿಕ ವಿವಾಹದ ಪ್ರಯೋಜನ ಪಡೆಯಬಯಸುವ ವಧು-ವರರು ಡಿ.30ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವರನಿಗೆ ಪಂಚೆ, ಶರ್ಟ್, ವಧುವಿಗೆ ತಾಳಿ ಕಾಲುಂಗುರ ಮತ್ತು ವಧುವರರ ತಂದೆ ತಾಯಿಗೆ ಬಟ್ಟೆ ನೀಡಲಾಗುವುದು.
ಐದು ಸಾವಿರ ಜನ
ಗಂಡು ಮತ್ತು ಹೆಣ್ಣಿನ ಕಡೆಯಿಂದ 50 ಜನ ಮದುವೆಯಲ್ಲಿ ಭಾಗವಹಿಸಬಹುದು. ಅಂದಾಜು 5 ಸಾವಿರ ಮಂದಿ ಈ ಉಚಿತ ಸಾಮೂಹಿಕ ವಿವಾಹಕ್ಕೆ ಸಾಕ್ಷಿ ಆಗಲಿದ್ದಾರೆ. ವಿಧುರ ಅಥವಾ ವಿಧವೆಯ ಮದುವೆ, ಅಂತರ್ಜಾತಿ ವಿವಾಹಕ್ಕೂ ಅವಕಾಶವಿದೆ ಎಂದು ಕುಮಾರಸ್ವಾಮಿ ಹೇಳಿದರು.

ಈ ನಂಬರ್’ಗೆ ಸಂಪರ್ಕಿಸಿ
ನೋಂದಾಣಿ ಮಾಡಿಸಿಕೊಳ್ಳುವವರು ವಿಧಾನಪರಿಷತ್ ಸದಸ್ಯರು, ಸಹಕಾರ ಭವನ, ಆರ್ಟಿಒ ಕಚೇರಿ ರಸ್ತೆ, ಶಿವಮೊಗ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳಿಗೆ 9448105059 ಅಥವಾ 9448127254 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪ್ರಮುಖರಾದ ಎಚ್.ಸಿ.ಬಸವರಾಜಪ್ಪ, ಬಿ.ಆರ್.ಮಧುಸೂದನ್, ಬಿ.ಎಸ್.ನಾಗರಾಜ್, ಹಿರಣ್ಣಯ್ಯ, ಲಕ್ಷ್ಮಣಪ್ಪ, ಕೆ.ವಿ.ಅಣ್ಣಪ್ಪ, ಉಪೇಂದ್ರ, ವೆಂಕಟೇಶ್ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
MLC Ayanuru Manjunath’s daughter to get married in a Community Marriage says Former MLA Kumaraswamy in Shimoga.