ಶಿವಮೊಗ್ಗ ಲೈವ್.ಕಾಂ | SHIMOGA | 4 ನವೆಂಬರ್ 2019
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಹಲವು ಪ್ರಕರಣಗಳಿವೆ. ಒಂದು ವೇಳೆ ತಮ್ಮ ವಿರುದ್ಧ ಪ್ರಕರಣಗಳಿಲ್ಲ ಎಂದು ಅವರು ಹೇಳಿದರೆ ಶಿವಮೊಗ್ಗಕ್ಕೆ ಬಂದಾಗ ಗೋಪಿ ಸರ್ಕಲ್’ನಲ್ಲಿ ದೊಡ್ಡ ಹಾರ ಹಾಕುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ 62 ಕೇಸುಗಳು ಪೆಂಡಿಂಗ್ ಇದೆ. ಹಾಗಾಗಿ ಎಸಿಬಿಯ ಹಲ್ಲು ಮತ್ತು ಉಗುರುಗಳನ್ನು ಕತ್ತಿರಿಸಿಟ್ಟಿದ್ದರು ಎಂದು ಆರೋಪಿಸಿದರು.
ಇನ್ನು, ಯಡಿಯೂರಪ್ಪ ಅವರ ಆಡಿಯೋ ಲೀಕ್ ಆದ ಕುರಿತು ಕೇಳಿದ ಪ್ರಶ್ನೆಗೆ, ಆಡಿಯೋವನ್ನು ಸುಪ್ರೀಂ ಕೋರ್ಟ್’ಗೆ ಒಪ್ಪಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಅದನ್ನು ನ್ಯಾಯಾಲಯಕ್ಕೆ ಒಪ್ಪಿಸುವುದಾದರೆ ಒಪ್ಪಿಸಬಹುದು. ಹೀಗೆ ಆಡಿಯೋ ಹುಡುಕುವ ಬದಲು, ಕಾಂಗ್ರೆಸ್’ನವರು ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
