ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020

ಹಿಂದೂ ಮುಖಂಡರ ಹತ್ಯೆ ಮಾಡಿ, ಹಿಂದು ಸಮಾಜದಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಿರುವ SDPI, PFI ಮತ್ತು KFD ಸಂಘಟನೆಗಳನ್ನು ನಿಷೇಧ ಮಾಡಬೇಕು ಒಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಿದ್ಧವಾಗಿದ್ದ ಹಲವರನ್ನು ಬಂಧಿಸಲಾಗಿದೆ. ಇವರಿಗೆಲ್ಲ SDPI, PFI ಮತ್ತು KFD ಸಂಘಟನೆಗಳ ಜೊತೆ ನಂಟು ಇರುವುದು ಗೊತ್ತಾಗಿದೆ. ಹಾಗಾಗಿ ಈ ಸಂಘಟನೆಯ ಎಲ್ಲ ಜಿಲ್ಲೆಗಳ ಮುಖಂಡರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾದವ್, ಜಿಲ್ಲಾ ಕಾರ್ಯದರ್ಶಿ ನಟರಾಜ್, ಬಜರಂಗದಳ ಜಿಲ್ಲಾ ಸಂಚಾಲಕ ನಾರಾಯಣ್ ಜೀ ವರ್ಣೇಕರ್, ದೀನದಯಾಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
- ಮಗು ಮೃತದೇಹ ಕಚ್ಚಿಕೊಂಡು ಶಿವಮೊಗ್ಗದ ಆಸ್ಪತ್ರೆ ಆವರಣದಲ್ಲಿ ಓಡಾಡಿದ ನಾಯಿ, ಯಾರ ಮಗು?
- ಬಾಳೆಬರೆ ಘಾಟ್, ಇನ್ನೂ 10 ದಿನ ವಾಹನ ಸಂಚಾರ ನಿಷೇಧ
- ತೀರ್ಥಹಳ್ಳಿ ಕಾಂಗ್ರೆಸ್ ಟಿಕೆಟ್ ಗೊಂದಲ ಕ್ಲಿಯರ್, ಡಿಕೆಶಿ ನೇತೃತ್ವದಲ್ಲಿ ಸಂಧಾನ ಸಭೆ ಸಕ್ಸಸ್, ಏನಾಯ್ತು ಚರ್ಚೆ?
- ಪಿಳ್ಳಂಗಿರಿಯಲ್ಲಿದ್ದ ಮತಗಟ್ಟೆ ಬದಲಾವಣೆ, ಹೊಸ ಮತಗಟ್ಟೆ ಎಲ್ಲಿದೆ?
- ಶಿವಮೊಗ್ಗದ ಇಂಡಸ್ಟ್ರಿಯಲ್ ಏರಿಯಾದ ಸಂಸ್ಥೆಯೊಂದರ ವಿರುದ್ಧ ಜಿಂದಾಲ್ ಕಂಪನಿ ದೂರು, ಕಾರಣವೇನು?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]