ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019

ಠೇವಣಿ ಇಟ್ಟಿ ಹಣ ಬಿಡಿಸಲು ಬ್ಯಾಂಕ್ ಸಿಬ್ಬಂದಿ ನಿರ್ಬಂಧ ಹೇರಿದ್ದರಿಂದ, ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು ತರಾಟಗೆ ತೆಗೆದುಕೊಂಡಿದ್ದಾರೆ.

ಜೈಲ್ ರಸ್ತೆಯಲ್ಲಿರುವ ಪಿಎಂಸಿ ಬ್ಯಾಂಕ್’ನಲ್ಲಿ ಘಟನೆ ನಡೆದಿದೆ. ಗ್ರಾಹಕರು ಬ್ಯಾಂಕ್’ನಲ್ಲಿ ಇಟ್ಟಿರುವ ಠೇವಣಿ ಹಣವನ್ನು ಹಿಂಪಡೆಯಲು ಬ್ಯಾಂಕ್ ಸಿಬ್ಬಂದಿ ನಿರ್ಬಂಧ ಹೇರಿದ್ದಾರೆ. ಠೇವಣಿ ಹಣದಲ್ಲಿ ಕೇವಲ ಒಂದು ಸಾವಿರ ರೂ. ಮಾತ್ರ ಬಿಡಿಸಿಕೊಳ್ಳಬಹುದು ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಸಿಬ್ಬಂದಿ ಹೀಗೆ ಹೇಳಿದ್ಯಾಕೆ?
ಪಿಎಂಸಿ ಬ್ಯಾಂಕ್’ನಲ್ಲಿ ನೂರಾರು ಗ್ರಾಹಕರು ಖಾತೆ ತೆರೆದು ಠೇವಣಿ ಇರಿಸಿದ್ದಾರೆ. ‘ಬ್ಯಾಂಕ್’ನಲ್ಲಿ 1.45 ಕೋಟಿ ರೂ. ಹಣವಿದೆ. ಆದರೆ ಗ್ರಾಹಕರೊಂದಿಗೆ ವ್ಯವಹಾರಕ್ಕೆ ಬಳಕೆ ಮಾಡದಿರಲು ರಿಜರ್ವ್ ಬ್ಯಾಂಕ್ ನಿರ್ಬಂಧ ಹೇರಿ ನೊಟೀಸ್ ನೀಡಿದೆ’ ಎಂದು ಬ್ಯಾಂಕ್ ಮ್ಯಾನೇಜರ್ ಮಹಾಬಲೇಶ್ವರ ಹೆಗಡೆ ತಿಳಿಸಿದ್ದಾರೆ.
ಗ್ರಾಹಕರಲ್ಲಿ ಆತಂಕವೋ ಅತಂಕ
ಬ್ಯಾಂಕ್ ಸಿಬ್ಬಂದಿ ಹಣ ಹಿಂಪಡೆಯಲು ಅವಕಾಶ ನೀಡದಿದ್ದರಿಂದ ಗ್ರಾಹಕರಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿದೆ. ಠೇವಣಿ ಹಣ ತಮ್ಮ ಕೈ ಸೇರುತ್ತದೋ ಇಲ್ಲವೋ ಎಂದು ಚಿಂತೆಗೀಡಾಗಿದ್ದಾರೆ. ಇದೆ ಕಾರಣಕ್ಕೆ ಈ ಬ್ಯಾಂಕ್’ನಲ್ಲಿ ಖಾತೆ ತೆರೆದ ಗ್ರಾಹಕರು ಶಾಖೆಗೆ ಭೇಟಿ ನೀಡಿ, ತಮ್ಮ ಹಣ ಹಿಂದಕ್ಕೆ ಮರಳಿ ಸಿಗುತ್ತದೊ ಇಲ್ಲವೊ ಎಂದು ಬ್ಯಾಂಕ್ ಸಿಬ್ಬಂದಿಯನ್ನು ಬಗೆಬಗೆಯಾಗಿ ಪ್ರಶ್ನಿಸುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]