SHIVAMOGGA LIVE NEWS | 20 NOVEMBER 2023
ತೋಟದಲ್ಲಿ ಬೋರ್ವೆಲ್ ಸ್ಟಾರ್ಟರ್ ಬಾಕ್ಸ್ ಕಳ್ಳತನ
KUMSI : ಅಡಗಡಿ ಗ್ರಾಮದ ತೋಟದಲ್ಲಿರುವ ಬೋರ್ವೆಲ್ಗೆ ಅಳವಡಿಸಿರುವ ಸ್ಟಾರ್ಟರ್ ಬಾಕ್ಸ್ ಕಳ್ಳತನ ಮಾಡಲಾಗಿದೆ. ನ.14ರ ರಾತ್ರಿ ಸ್ಟಾರ್ಟರ್ ಕಳ್ಳತನವಾಗಿದೆ. ಇದರ ಅಂದಾಜು ಮೌಲ್ಯ 25 ಸಾವಿರ ರೂ. ಎಂದು ತೋಟದ ಮಾಲೀಕ ಉಮೇಶ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿಂದೆ ಸ್ಟಾರ್ಟರ್ ಬಾಕ್ಸ್, ಮೋಟರ್ ಫಿಲ್ಟರ್ ಕಳ್ಳತನವಾಗಿದೆ ಎಂದು ಆಪಾದಿಸಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸೂಡಿ ಫಾರಂ ಸಮೀಪ ಅಂದರ್ ಬಾಹರ್
SHIMOGA : ತಾಲೂಕಿನ ಹಸೂಡಿ ಫಾರಂ ಸಮೀಪ ಅಂದರ್ ಬಾಹರ್ ಆಟವಾಡುತ್ತಿರುವ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಗಸ್ತು ತಿರುಗುತ್ತಿದ್ದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರಿಗೆ ಅಂದರ್ ಬಾಹರ್ ಆಟವಾಡುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಪರಿಶೀಲನೆ ನಡೆಸಿದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ- ‘ಒಂದು SCREEN SHOT ವಾಟ್ಸಪ್ ಮಾಡಿದರೆ 250 ರೂ. ಸಿಗುತ್ತೆ’, ನಂಬಿದ ಶಿವಮೊಗ್ಗದ ಯುವಕನಿಗೆ ಆಗಿದ್ದೇನು?
ತುಂಗಾ ನಗರ ಚಾನಲ್ ಬಳಿ ಇಬ್ಬರು ಅರೆಸ್ಟ್
SHIMOGA : ತುಂಗಾ ನಗರ ಚಾನಲ್ ಸಮೀಪ ಇಬ್ಬರು ಯುವಕರು ಸಾರ್ವಜನಿಕ ನೆಮ್ಮದಿಗೆ ಭಂಗ ಬರುವಂತೆ ವರ್ತಿಸುತ್ತಿದ್ದಾರೆ ಎಂದು ದೂರು ಬಂದಿತ್ತು. ಸ್ಥಳಕ್ಕೆ ತೆರಳಿದ್ದ ಪೊಲೀಸರು ಜಾಫರ್ ಸಾದಿಕ್ ಮತ್ತು ತಬರೇಜ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತು ಸೇವನೆ ಮಾಡಿರುವ ಅನುಮಾನದ ಮೇರೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
