ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 DECEMBER 2022
ಶಿವಮೊಗ್ಗ : ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ಶಿವಮೊಗ್ಗದ ರಸ್ತೆ ಮೇಲಿಟ್ಟು ಪೊಲೀಸರು ಬುಲ್ಡೋಜರ್ ಹತ್ತಿಸಿದರು. ಇನ್ಮುಂದೆ ಈ ರೀತಿಯ ಸೈಲೆನ್ಸರ್ ಬಳಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು (bike silencer) ನಾಶಪಡಿಸಲಾಯಿತು. ಸಾರ್ವಜನಿಕವಾಗಿ ಸೈಲೆನ್ಸರ್ ನಾಶ ಪಡಿಸಿ ಜಾಗೃತಿ ಮೂಡಿಸಲಾಯಿತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸಾಲಾಗಿ ಜೋಡಿಸಿ ಬುಲ್ಡೋಜರ್ ಹತ್ತಿಸಿದರು
STOP NOISE SHIVAMOGGA ಕಾನ್ಸೆಪ್ಟ್ ರೂಪಿಸಿಕೊಂಡು, ಪೊಲೀಸರು, ಕರ್ಕಶ ಶಬ್ದ ಮಾಡುವ ದ್ವಿಚಕ್ರ ವಾಹನಗಳನ್ನು ತಡೆದು ಸೈಲೆನ್ಸರ್ (bike silencer) ಬಿಚ್ಚಿಸಿದ್ದಾರೆ. ಅಲ್ಲದೆ ವಿಪರೀತ ಸದ್ದು ಮಾಡುವ ಹಾರನ್ ಗಳನ್ನು ಕೂಡ ಪೊಲೀಸರು ತೆಗೆಸಿದ್ದಾರೆ. 70ಕ್ಕೂ ಸೈಲೆನ್ಸರ್ ಗಳು ಮತ್ತು 40ಕ್ಕು ಹೆಚ್ಚು ಹಾರನ್ ಗಳನ್ನು ಇವತ್ತು ಶಿವಪ್ಪನಾಯಕ ಪ್ರತಿಮೆ ಪಕ್ಕದ ಬಿ.ಹೆಚ್.ರಸ್ತೆಯಲ್ಲಿ ಜೋಡಿಸಲಾಗಿತ್ತು. ಅವುಗಳ ಮೇಲೆ ಬುಲ್ಡೋಜರ್ ಹತ್ತಿಸಿದರು.
ಕರ್ಕಶ ಶಬ್ದದ ಸೈಲೆನ್ಸರ್ ಗಳ (bike silencer) ವಿರುದ್ಧ ಪೊಲೀಸರ ಕಾರ್ಯಾಚರಣೆ ಗಮನಿಸಲು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ತಮ್ಮ ಮೊಬೈಲ್ ಗಳ ಮೂಲಕ ಕಾರ್ಯಾಚರಣೆಯನ್ನು ಫೋಟೊ, ವಿಡಿಯೋ ತೆಗೆದುಕೊಂಡರು.
ಜಿಲ್ಲೆಯಾದ್ಯಂತ ನಡೆಯುತ್ತಿದೆ ಕಾರ್ಯಾಚರಣೆ
ಇದೆ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ಸುಮಾರು 70 ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ನಾಶಪಡಿಸಲಾಗಿದೆ. ಇಂತಹ ಸೈಲೆನ್ಸರ್ ಬಳಕೆ ಮಾಡದಂತೆ ವಾಹನ ಸವಾರರಿಗೆ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ಮತ್ತು ಸಂಚಾರಿ ಠಾಣೆ ಸಿಬ್ಬಂದಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದೆ ರೀತಿ ಜಿಲ್ಲೆಯ ಎಲ್ಲಾ ಉಪ ವಿಭಾಗದಲ್ಲಿಯು ಕಾರ್ಯಾಚರಣೆ ನಡೆಸಿ, ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ನಾಶಪಡಿಸಲಾಗುತ್ತಿದೆ ಎಂದರು.
ಇನ್ನು, ಆರ್.ಟಿ.ಒ ನಿಯಮದ ಪ್ರಕಾರ ಸೈಲೆನ್ಸರ್ ಗಳ ಮಾರ್ಪಾಡು ಮಾಡುವಂತಿಲ್ಲ. ಇಂತಹ ಸೈಲೆನ್ಸರ್ ಗಳಿಂದ ಶಬ್ದ ಮಾಲಿನ್ಯ ಹೆಚ್ಚು. ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಸೈಲೆನ್ಸರ್ ಮತ್ತು ಹೆಚ್ಚು ಶಬ್ದ ಮಾಡುವ ಹಾರನ್ ಗಳ ವಿರುದ್ಧ ಕಾರ್ಯಾಚರಣೆ ನಿರಂತರವಾಗಿರಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ಪೊಲೀಸ್ಗೆ ರಾಷ್ಟ್ರಮಟ್ಟದ ಗರಿ, ಇನ್ಸ್ಪೆಕ್ಟರ್ ಗುರುರಾಜ್ ಇಂಡಿಯಾ ಸೈಬರ್ ಕಾಪ್
ಶಿವಮೊಗ್ಗ ಡಿವೈಎಸ್ಪಿ ಬಾಲರಾಜ್, ಸಂಚಾರ ಠಾಣೆ ಸಿಬ್ಬಂದಿ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.