ಶಿವಮೊಗ್ಗ ಲೈವ್.ಕಾಂ | SHIMOGA | 11 ಮಾರ್ಚ್ 2020
ಚಿಕನ್ ಸೇವಿಸಿದರೆ ಕರೋನ ಬರಲಿದೆ ಎಂಬ ವದಂತಿ ಹಿನ್ನೆಲೆ ಕುಕ್ಕುಟೋದ್ಯಮ ಭಾರಿ ನಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಸಂತೆ ಕಡೂರಿನಲ್ಲಿ ಸುಮಾರು ನಾಲ್ಕು ಸಾವಿರ ಕೋಳಿಗಳನ್ನ ಜೀವಂತ ಸಮಾಧಿ ಮಾಡಲಾಗಿದೆ.
https://www.facebook.com/liveshivamogga/videos/2448529132032749/?t=0
ಕೋಳಿ ಫಾರಂ ಮಾಲೀಕ ಶ್ರೀನಿವಾಸ್ ಅವರು ತಮ್ಮ ಫಾರಂ ಸಮೀಪ ಗುಂಡಿ ತೆಗೆಸಿ, ಕೋಳಿಗಳ ಜೀವಂತ ಸಮಾಧಿ ಮಾಡಿಸಿದ್ದಾರೆ. ಕೋಳಿ ಮಾಂಸಕ್ಕೆ ಡಿಮಾಂಡ್ ಕಡಿಮೆಯಾದ ಹಿನ್ನೆಲೆ, ಅಂಗಡಿಗಳು ಕೋಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫಾರಂ ಮಾಲೀಕ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚಿಕನ್ ಸೇವಿಸಿದರೆ ಕರೋನ ಬರಲಿದೆ ಎಂದು ವದಂತಿ ಹಬ್ಬಿದೆ. ಚಿಕನ್ ಸೇವನೆ ಪ್ರಮಾಣ ಕುಸಿತ ಕಂಡಿದೆ. ಇದರಿಂದಾಗಿ ಕುಕ್ಕುಟೋದ್ಯಮ ಸಂಪೂರ್ಣ ಕುಸಿತ ಕಂಡಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
