ಶಿವಮೊಗ್ಗದ ಮಹಿಳೆಯರೆ ಎಚ್ಚರ, ನಿಮ್ಮ ಮನೆಗೂ ಬರಬಹುದು ‘ಬ್ರೌನ್ ಪೌಡರ್’ ಗ್ಯಾಂಗ್, ಏನಿದು?

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 19 MARCH 2021 ಸರಗಳ್ಳರ ಭೀತಿ ಒಂದೆಡೆಯಾದರೆ, ಶಿವಮೊಗ್ಗದಲ್ಲಿ ಈಗ ಬ್ರೌನ್ ಪೌಡರ್ ಗ್ಯಾಂಗ್ ಪ್ರತ್ಯಕ್ಷವಾಗಿದೆ. ಸ್ವಲ್ಪ ಯಾಮಾರಿದರೂ ಮಹಿಳೆಯರು ತಮ್ಮ ಕಣ್ಮುಂದೆಯೇ ಚಿನ್ನಾಭರಣ ಕಳೆದುಕೊಳ್ಳುವ ಆತಂಕವಿದೆ. ಶಿವಮೊಗ್ಗದ ಮಹಿಳೆಗೆ ವಂಚನೆ ಫಳಫಳ ಹೊಳೆಯುವಂತೆ ಮಾಡಿ ಕೊಡ್ತೀವಿ ಅಂತಾ ನಂಬಿಸಿ, ಮಹಿಳೆಯೊಬ್ಬರ ಮಾಂಗಲ್ಯ ಸರವನ್ನೇ ಕಟ್ ಮಾಡಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಘಟನೆ ಸಂಭವಿಸಿದೆ. ಅಶೋಕ ನಗರದ ಸಂಗೀತಾ ಎಂಬುವವರನ್ನು ಕಳ್ಳರು ವಂಚಿಸಿದ್ದಾರೆ. ಚಿನ್ನ, ಬೆಳ್ಳಿಯ … Read more

ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಧಗಧಗ ಉರಿದ ಬೈಕ್

190321 Bike Burnt at Devakatikoppa in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 MARCH 2021 ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಶಿವಮೊಗ್ಗದ ದೇವಕಾತಿಕೊಪ್ಪದಲ್ಲಿ ಬುಧವಾರ ರಾತ್ರಿ ಘಟನೆ ಸಂಭವಿಸಿದೆ. ಚಂದ್ರ ಎಂಬುವವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ತೆಂಗಿನ ಗರಿಗಳನ್ನು ಇರಿಸಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರೆ ಬೆಂಕಿ ನಂದಿಸಿದ್ದು  ಯಾವುದೇ ಅನಾಹುತ ಸಂಭವಿಸಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ … Read more

80 ಅಡಿ ಆಳಕ್ಕೆ ಬೀಳಲು ಕಾರಣ ಬಿಚ್ಚಿಟ್ಟ ಗಾಯಾಳು, ಹೇಗಾಯ್ತು ಘಟನೆ? ಆತ ಬಿದ್ದಿದ್ದು ಪೊಲೀಸರಿಗೆ ಗೊತ್ತಾಗಿದ್ದು ಹೇಗೆ?

160321 Rescue of Person from Tunga Channel 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 MARCH 2021 ಸಾಗರ ರಸ್ತೆಯಲ್ಲಿ ತುಂಗಾ ಚಾನಲ್‍ಗೆ ಬಿದ್ದ ವ್ಯಕ್ತಿಗೆ ಚಿಕಿತ್ಸೆ ಮುಂದುವರೆದಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಪೊಲೀಸರ ವಿಚಾರಣೆ ವೇಳೆ  80 ಅಡಿ ಆಳಕ್ಕೆ ಬೀಳಲು ಕಾರಣವೇನು ಎಂದು ತಿಳಿಸಿದ್ದಾರೆ. ಸಾಗರ ತಾಲೂಕು ನೀಚಡಿ ನಿವಸಿ ಸಂತೋಷ್ (45) ಸೋಮವಾರ ರಾತ್ರಿ, ಸಾಗರ ರಸ್ತೆಯ ತುಂಗಾ ಚಾನಲ್‍ನಗೆ ಬಿದ್ದಿದ್ದರು. ನಡುರಾತ್ರಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಸಂತೋಷ್ ಅವರ ರಕ್ಷಣೆ ಮಾಡಿತ್ತು. ಇದನ್ನೂ ಓದಿ | ಗಾಡಿಕೊಪ್ಪ ಬಳಿ … Read more

ಶಿಕಾರಿಪುರದಲ್ಲಿ ಬೈಕಲ್ಲಿ ಗಾಂಜಾ ಸಾಗಿಸುತ್ತಿದ್ದವರು ಅರ್ಧ ದಾರಿಯಲ್ಲೇ ಅರೆಸ್ಟ್, ಎಷ್ಟಿತ್ತು ಗಾಂಜಾ?

170321 Ganja Peddlers Arrest in Shikaripura Eesuru 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 17 MARCH 2021 ಗಾಂಜಾ ಸಾಗಣೆ ಕುರಿತು ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ರಸ್ತೆಯಲ್ಲಿ ತಪಾಸಣೆ ನಡೆಸಿದಾಗ ಬೈಕ್‍ನಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ. ಗಾಂಜಾ, ವಾಹನ ಸಹಿತ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ರಜಾಕ್ ಮತ್ತು ಖಲೀದ್ ಎಂಬುವವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಶಿಕಾರಿಪುರದ ಈಸೂರು – ಗಾಮ ರಸ್ತೆಯಲ್ಲಿ ತಪಾಸಣೆ ನಡೆಸುವಾಗ, 580 ಗ್ರಾಮ್ ಒಣ ಗಾಂಜಾದ ಜೊತೆಗೆ … Read more

ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ 15 ಮಂದಿ ಶಿವಮೊಗ್ಗದಲ್ಲಿ ಅರೆಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021 ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ 15 ಆರೋಪಿಗಳನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಸೀರ್(25), ಗಣೇಶ(23), ಅಹಮದ್ ವಜೀದ್(27), ಮೋಹನ್(37), ರಫೀಕ್ ಅಹಮದ್ (40), ರಮೇಶ್(24), ಅಂಜು ಅಲಿಯಾಸ್  ಮಹಮದ್ ಅಶ್ರಫ್ (31), ಶಾಹಿದ್ (30), ಅಮ್ಜಾದ್ ಅಲಿಯಾಸ್ ಅಮ್ಜು  (30), ಅಪ್ಸರ್ ಪಾಷ (35), ವೆಂಕಟೇಶ (30), ತಿರುಮಲೇಶ್ (26), ತಬ್ರೇಜ್ (24), ಅರುಣ (28), ಚಂದ್ರಾ ನಾಯ್ಕ (57) ಬಂಧಿತರು. ತುಂಗಾನಗರ ಠಾಣೆಯಲ್ಲಿ … Read more

ಗಾಡಿಕೊಪ್ಪ ಬಳಿ ತುಂಗಾ ಚಾನಲ್ಗೆ ಬಿದ್ದ ಸಾಗರದ ವ್ಯಕ್ತಿ, ನಡು ರಾತ್ರಿ 80 ಅಡಿಯಿಂದ ರಕ್ಷಣೆ

160321 Rescue of Person from Tunga Channel 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021 ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ತುಂಗಾ ಚಾನಲ್‍ಗೆ ವ್ಯಕ್ತಿಯೊಬ್ಬ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ | ಸೆಲ್ಫಿ ಗಂಡಾಂತರ, ತುಂಗಾ ಡ್ಯಾಂನಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ, ಪತ್ತೆಯಾಯ್ತು ಮೃತದೇಹ ಸಾಗರದ ಸಂತೋಷ್ (45) ಎಂಬುವವರು ತುಂಗಾ ಚಾನಲ್‍ಗೆ ಬಿದ್ದಿದ್ದರು. ಅವರು ಚಾನಲ್‍ಗೆ ಬೀಳಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಅಗ್ನಿಶಾಮಕ ಸಿಬ್ಬಂದಿಗೆ … Read more

ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳರ ಹಾವಳಿ, ತಿಲಕನಗರದಲ್ಲಿ ಮಾಂಗಲ್ಯ ಸರ ಕಳ್ಳತನ

Chain Theft Reference Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021 ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳರು ಕೈ ಚಳಕ ತೋರಿಸಿದ್ದಾರೆ. ಬೈಕ್‍ನಲ್ಲಿ ಬಂದು ಮಹಿಳೆಯೊಬ್ಬರ ಕೊರಳಲ್ಲಿ ಇದ್ದ ಮಾಂಗಲ್ಯ ಸರ ಎಳೆದೊಯ್ದಿದ್ದಾರೆ. ನಗರದ ಹೃದಯ ಭಾಗ ತಿಲಕನಗರದಲ್ಲಿ ಘಟನೆ ಸಂಭವಿಸಿದೆ. ಸುವರ್ಣಾ (65) ಎಂಬುವವರ ಮಾಂಗಲ್ಯ ಸರ ಕಳ್ಳತನವಾಗಿದೆ. ಎರಡು ಮಾಂಗಲ್ಯವಿದ್ದ 35 ಗ್ರಾಂನ 1.22 ಲಕ್ಷ ರೂ. ಅಂದಾಜು ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ಯಲಾಗಿದೆ. ಹೇಗಾಯ್ತು ಘಟನೆ? ತಿಲಕನಗರದ 3ನೇ ಅಡ್ಡರಸ್ತೆಯಲ್ಲಿ ಸುವರ್ಣಾ ಅವರ ಮನೆಯಿದೆ. … Read more

ಪತ್ರದಲ್ಲಿ ಇದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮೂರು ಲಕ್ಷ ಕಳೆದುಕೊಂಡ ಶಿವಮೊಗ್ಗದ ಮಹಿಳೆ

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 MARCH 2021 ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಮೂರು ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಹುಮಾನಕ್ಕೆ ಮೊಬೈಲ್ ನಂಬರ್ ಆಯ್ಕೆಯಾಗಿದೆ ಎಂದು ಪತ್ರ ಕಳುಹಿಸಿ, ವಂಚಿಸಲಾಗಿದೆ. ಇದನ್ನೂ ಓದಿ | ಕೌನ್ ಬನೇಗಾ ಕರೋಡ್‌ಪತಿ ಹೆಸರಲ್ಲಿ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ 1.43 ಲಕ್ಷ ರೂ. ವಂಚನೆ, ವಂಚಿಸಿದ್ದು ಹೇಗೆ? ಶಿವಮೊಗ್ಗದ ವನಿತಾ (29) ಎಂಬುವವರನ್ನು ವಂಚಿಸಲಾಗಿದೆ. ದೆಹಲಿಯ ನಾಪ್ಟಾಲ್‍ ಆನ್‍ಲೈನ್ ಶಾಪಿಂಗ್ ಪ್ರೈವೇಟ್ ಲಿಮಿಟೆಡ್ … Read more

ಶಿವಮೊಗ್ಗ KSRTC ಬಸ್ ನಿಲ್ದಾಣದ ಮುಂದೆ ಫೋಟೊಗ್ರಾಫರ್ ಮೊಬೈಲ್ ಕದ್ದ ಖದೀಮರು

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 MARCH 2021 ಶಿವಮೊಗ್ಗ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಯುವಕರ ಗುಂಪೊಂದು ವ್ಯಕ್ತಿಯೊಬ್ಬರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ಘಟನೆ? ಫೋಟೊಗ್ರಾಫರ್ ಮಧುಸೂದನ್ ಅವರು ಮೈಸೂರಿಗೆ ಹೋಗಲು ಬೆಳಗಿನ ಜಾವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು. ಸ್ನೇಹಿತರೊಬ್ಬರು ಬೈಕ್‍ನಲ್ಲಿ ಮಧುಸೂದನ್ ಅವರನ್ನು ಬಸ್ ನಿಲ್ದಾಣದ ಮುಂದೆ ಇರುವ ಲೋಕಾಯುಕ್ತ ಠಾಣೆ ಮುಂದೆ ಬಿಟ್ಟು ತೆರಳಿದರು. ಸ್ನೇಹಿತ ತೆರಳುತ್ತಿದ್ದಂತೆ, ಎದುರಿನಿಂದ … Read more

ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿಯೇ ಇಂಟರ್ಸಿಟಿ ರೈಲಿಗೆ ಸಿಲುಕಿದ ಯುವಕ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 MARCH 2021 ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿಯೇ ಯುವಕನೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಯುವಕನ ಗುರುತು ಪತ್ತೆಯಾಗಿಲ್ಲ. ಬೆಂಗಳೂರು – ಶಿವಮೊಗ್ಗ ಇಂಟರ್‍ಸಿಟಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ರಾತ್ರಿ ಇಂಟರ್‍ಸಿಟಿ ರೈಲು ಭದ್ರಾವತಿಗೆ ಬಂದಾಗ ಘಟನೆ ಸಂಭವಿಸಿದೆ. ನಿಲ್ದಾಣದಿಂದ ರೈಲು ಹೊರಟ ಬಳಿಕ ಘಟನೆ ಬೆಳಕಿಗೆ ಬಂದಿದೆ. ಯುವಕ ಆಕಸ್ಮಿಕವಾಗಿ ರೈಲಿಗೆ ಸಿಲುಕಿದನೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ತನಿಖೆಯಿಂದ ತಿಳಿದು ಬರಬೇಕಿದೆ. ಯುವಕನಿಗೆ 25 ವರ್ಷ ಎಂದು ಆಂದಾಜಿಸಲಾಗಿದೆ. … Read more