ಮಂಗಳೂರಲ್ಲಿ ಬಾಂಬ್ ಇಟ್ಟವನಿಗಾಗಿ ಸಾಗರ, ಹೊಸನಗರದಲ್ಲಿ ನಡೆದಿತ್ತು ಶೋಧ, ಪೊಲೀಸರು ಎಲ್ಲೆಲ್ಲಿ ತಲಾಷ್ ಮಾಡಿದ್ದರು ಗೊತ್ತಾ?

police jeep

ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020 ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೀವಂತ ಬಾಂಬ್ ಇರಿಸಿದ್ದ ಆದಿತ್ಯರಾವ್‌ಗಾಗಿ ಶಿವಮೊಗ್ಗ ಪೊಲೀಸರು ಮಂಗಳವಾರ ರಾತ್ರಿಯಿಡಿ ಶೋಧಕಾರ್ಯ ನಡೆಸಿದ್ದಾರೆ. ಲಭ್ಯ ಮಾಹಿತಿ ಮೇರೆಗೆ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದು, ಅಷ್ಟರಲ್ಲಾಗಲೇ ಆತ ಸಾಗರದಿಂದ ಬೆಂಗಳೂರಿಗೆ ಹೋಗಿದ್ದಾನೆಂಬ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಮಂಗಳೂರಿನಿಂದ ಆತ ಉಡುಪಿ ಮಾರ್ಗವಾಗಿ ಜಿಲ್ಲೆಯ ಹೊಸನಗರ, ಸಾಗರ ತಲುಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆ ಆಧಾರದ ಮೇಲೆ ಹೊಸನಗರದಲ್ಲಿ ತಪಾಸಣೆ … Read more

ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಯುವಕನ ಮರ್ಡರ್ ಮಾಡಿದ್ದವರು ದೊಡ್ಡಪೇಟೆ ಪೊಲೀಸರ ಬಲೆಗೆ

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020 ಹುಡುಗಿ ವಿಚಾರಕ್ಕೆ ಸಂಬಂಧಿಸಿ ನ್ಯೂಮಂಡ್ಲಿ ಆಟೋ ಸ್ಟಾಂಡ್ ಬಳಿ ಯುವಕನನ್ನು ಕೊಲೆಮಾಡಿದ್ದ ಇಬ್ಬರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯೂ ಮಂಡ್ಲಿಯಲ್ಲೇ ಅರೆಸ್ಟ್ ಮಾಡಲಾಗಿದೆ. ಇದೇ ಬಡಾವಣೆಯ ತೌಹೀದ್ ಖಾನ್ (19), ಮಹಮ್ಮದ್ ಯೂನಸ್ (19) ಬಂಧಿತರು. ಭಾನುವಾರ ಸಂಜೆ ಮಹಮ್ಮದ್ ಆಲಿ ಅಲಿಯಾಸ್ ಎಂ.ಡಿ.ಆಲಿ ಎಂಬಾತನನ್ನು ಕೊಲೆ ಮಾಡಿದ್ದರು. ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಉಮೇಶ್ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಆರ್.ಎಂ.ವಸಂತಕುಮಾರ್ ನೇತೃತ್ವದಲ್ಲಿ ದೊಡ್ಡಪೇಟೆ … Read more

ಯುವತಿ ವಿಚಾರವಾಗಿ ಯುವಕನಿಗೆ ಚಾಕು ಇರಿದ ಭಗ್ನ ಪ್ರೇಮಿ, ನ್ಯೂ ಮಂಡ್ಲಿಯಲ್ಲಿ ಯುವಕ ಸಾವು

murder graphical image

ಶಿವಮೊಗ್ಗ ಲೈವ್.ಕಾಂ | SHIMOGA | 20 ಜನವರಿ 2020 ಯುವತಿಯೊಬ್ಬಳ ವಿಚಾರವಾಗಿ ಭಗ್ನಪ್ರೇಮಿಗಳ ನಡುವಿನ ವೈಷಮ್ಯ, ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಶಿವಮೊಗ್ಗದ ನ್ಯೂ ಮಂಡ್ಲಿ ಸರ್ಕಲ್’ನಲ್ಲಿ ಘಟನೆ ನಡೆದಿದೆ. ಮೊಹಮ್ಮದ್ ಅಲಿ (23) ಕೊಲೆಯಾದ ಯುವಕ. ತೋಹಿದ್ ಹತ್ಯೆ ಮಾಡಿದಾತ. ಯುವತಿಯೊಬ್ಬಳ ವಿಚಾರವಾಗಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಭಾನುವಾರ ಸಂಜೆ ಹೊಟೇಲ್ ಒಂದರ ಸಮೀಪ ಸ್ನೇಹಿತರ ಜೊತಗೆ ನಿಂತಿದ್ದ ಮೊಹಮ್ಮದ್ ಅಲಿಗೆ, ಬೈಕ್’ನಲ್ಲಿ ಬಂದ ತೋಹಿದ್, ಚಾಕು ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮೊಹಮದ್ … Read more

ಮಹಿಳೆ ಫೋಟೊ ಮೇಲೆ ಅಶ್ಲೀಲ ಪದ ಬಳಸಿ, ಇನ್ಸ್’ಟಾಗ್ರಾಂನಲ್ಲಿ ಟ್ಯಾಗ್ ಮಾಡುತ್ತಿದ್ದವ ಅರೆಸ್ಟ್, ಬಂಧಿತ ಯಾರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 19 ಜನವರಿ 2020 ಸಾಮಾಜಿಕ ಜಾಲತಾಣದಲ್ಲಿ ಮಹಿಯೊಬ್ಬರ ಪೋಟೊದ ಮೇಲೆ ಅಶ್ಲೀಲ ಪದ ಬಳಸಿ, ಅವರ ಖಾತೆಗೆ ಟ್ಯಾಕ್ ಮಾಡುತ್ತಿದ್ದ ಆರೋಪಿಯನ್ನು ಶಿವಮೊಗ್ಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಸೊರಬ ತಾಲೂಕು ಕೆಇಬಿ ಕಾಲೋನಿಯ ಮೇಘರಾಜ (19) ಎಂಬಾತನನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರ ಫೋಟೊ ಮೇಲೆ ಅಶ್ಲೀಲ ಪದಗಳನ್ನು ಬರೆದು, ನಕಲಿ ಇನ್ಸ್’ಟಾಗ್ರಾಂ ಖಾತೆ ತೆರೆದು ಅಪ್’ಲೋಡ್ ಮಾಡಲಾಗುತ್ತಿತ್ತು. ಅಲ್ಲದೆ ಆ ಫೋಟೊವನ್ನು ಮಹಿಳೆಯ ಇನ್ಸ್’ಟಾಗ್ರಾಂ ಖಾತೆಗೆ ಟ್ಯಾಗ್ ಕೂಡ … Read more

ಆಯನೂರು ಬಳಿ ಅಪಘಾತ, ಟಿಪ್ಪರ್, ಗೂಡ್ಸ್ ಆಟೋ ಡಿಕ್ಕಿ, ಒಬ್ಬ ಸಾವು, ಗೂಡ್ಸ್ ಆಟೋ ನುಜ್ಜುಗುಜ್ಜು

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಟಿಪ್ಪರ್ ಲಾರಿ ಮತ್ತು ಟಾಟಾ ಏಸ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಲಗೇಜ್ ಆಟೋ ಚಾಲಕ ಆಯನೂರು ಕೋಟೆಯ ಭಾಷಾ ಸಾಬ್ (55) ಮೃತರು. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಅವರಕ್ಕು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಯನೂರಿನ ವೀರಗಾರನ ಭೈರನಕಪ್ಪದ ಬಳಿ ಘಟನೆ ನಡೆದಿದೆ. ಟಿಪ್ಪರ್ ಚಾಲಕನ ಅಜಾಗರುಕತೆಯೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಟಿಪ್ಪರ್ … Read more

ಶಿವಮೊಗ್ಗದಲ್ಲಿನ ಭೀಕರ ಅಪಘಾತದ ಸಿಸಿಟಿವಿ ವಿಡಿಯೋ ವೈರಲ್, ಡೇಂಜರ್ ಸ್ಪಾಟ್ ಆಗುತ್ತಿದೆ ಈ ಸರ್ಕಲ್, ವಾಹನ ಚಾಲಕರೇ ಎಚ್ಚರ

170120 Accident In Mahaveera Circle 1

ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020 ಶಿವಮೊಗ್ಗದ ಮಹಾವೀರ ಸರ್ಕಲ್’ನಲ್ಲಿ ಇವತ್ತು ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದ ಸಿಸಿಟಿವಿ ವಿಡಿಯೊ ಲಭ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಸವಾರರು ಗಾಳಿಯಲ್ಲಿ ಹಾರಿ ರಸ್ತೆಗೆ ಬೀಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ATNC ಕಾಲೇಜು ಕಡೆಯಿಂದ ವೇಗವಾಗಿ ಬಂದ ಕಾರು ಮತ್ತು ರೈಲ್ವೆ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಕಾರು ಮತ್ತು ಬೈಕು ಒಟ್ಟಿಗೆ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಬೈಕು, ಕಾರು ಢಿಕ್ಕಿ, ಒಬ್ಬ ಸಾವು, ಪೊಲೀಸ್ ಚೌಕಿಯು ಜಖಂ

ಶಿವಮೊಗ್ಗ ಲೈವ್.ಕಾಂ | SHIMOGA | 17 ಜನವರಿ 2020 ಶಿವಮೊಗ್ಗದ ಮಹಾವೀರ ಸರ್ಕಲ್’ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ. ಬೈಕ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿದೆ. ಬೈಕ್ ಸವಾರ ನಾಗರಾಜ್ (24) ಗಂಭೀರವಾಗಿ ಗಾಯಗೊಂಡಿದ್ದು, ಮೃತರಾಗಿದ್ದಾರೆ. ಹರೀಶ್, ರವಿ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಪಲ್ಟಿ, ಬೈಕು ನುಜ್ಜುಗುಜ್ಜು ರೈಲ್ವೆ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಬೈಕ್ ಮತ್ತು ಕಾರಿನ ನಡುವೆ … Read more

ಶಿವಮೊಗ್ಗ ಸಿಟಿ ಬಸ್, ಬೈಕ್ ನಡುವೆ ಡಿಕ್ಕಿ, ಸವಾರ ಸಾವು, ರೊಚ್ಚಿಗೆದ್ದ ಜನರಿಂದ ಬಸ್ ಮೇಲೆ ಕಲ್ಲು, ಗ್ಲಾಸ್ ಪೀಸ್ ಪೀಸ್

ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020 ಶಿವಮೊಗ್ಗದ ಮಿಳಘಟ್ಟ ರಸ್ತೆಯಲ್ಲಿ ಬೈಕ್ ಮತ್ತು ಸಿಟಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನನ್ನು ಸಾದಿಕ್ (31) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಲ್ಲೇ ಸಾದಿಕ್ ಕೊನೆಯುಸಿರೆಳೆದಿದ್ದಾರೆ. ಅಪಘಾತವಾಗುತ್ತಿದ್ದಂತೆ ಸಾರ್ವಜನಿಕರು ಗುಂಪುಗೂಡಿದ್ದಾರೆ. ಅಲ್ಲದೆ ಸಿಟಿ ಬಸ್’ಗೆ ಕಲ್ಲು ತೂರಿದ್ದಾರೆ. ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಘಟನೆಯಿಂದಾಗಿ ಮಿಳಘಟ್ಟ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ … Read more

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಚರಂಡಿಯಲ್ಲಿ ವ್ಯಕ್ತಿಯ ಶವ ಪತ್ತೆ

140120 Unknown Body Found in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 14 ಜನವರಿ 2020 ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಮುಂದೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ರಸ್ತೆಯಲ್ಲಿ ಹೋಗುವವರು ಮೃತದೇಹ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತನ ಹೆಸರು, ಗುರುತು ಪತ್ತೆಯಾಗಿಲ್ಲ. ಡಿಸಿಸಿ ಬ್ಯಾಂಕ್ ಮುಂದಿರುವ ಕಟ್ಟೆ ಮೇಲೆ ರಾತ್ರಿ ಮಲಗಿದ್ದಾಗ, ಆಯಾತಪ್ಪಿ ಚರಂಡಿಗೆ ಬಿದ್ದಿರುವ ಶಂಕೆ ಇದೆ. ಚರಂಡಿ ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿರುವ ಕುರಿತು ಪೊಲೀಸರಿಗೆ ಅನುಮಾನವಿದೆ. ಸದ್ಯ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಜಯನಗರ ಠಾಣೆ … Read more

16 ಮನೆ ಬೀಗ ಒಡೆದು ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್ ಜೈಲುಪಾಲು, ಇವರ ಬಳಿ ಸಿಕ್ಕ ಚಿನ್ನ, ಬೆಳ್ಳಿ ಆಭರಣಗಳೆಷ್ಟು ಗೊತ್ತಾ?

090120 Shikaripura Thieves Arrested in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 9 ಜನವರಿ 2020 16 ಮನೆಗಳ ಬೀಗ ಒಡೆದು ಕಳ್ಳತನ ಮಾಡಿದ್ದ ಎಂಟು ಕಳ್ಳರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಆನವಟ್ಟಿಯಲ್ಲಿ ಈ ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು, ಮಂಜುನಾಥ್, ರಂಗಪ್ಪ, ವೆಂಕಟೇಶ್, ಶಶಿಕುಮಾರ್, ರಾಜೇಶ್, ಗವಿರಾಜ್, ರಾಜಪ್ಪ, ಲೋಕೇಶ್ ಎಂಬುವವರನ್ನು ಬಂಧಿಸಲಾಗಿದೆ ಎಂದರು. ಬಂಧಿತರಿಂದ ಸುಮಾರು 27 ಲಕ್ಷ ಮೌಲ್ಯದ 774 ಗ್ರಾಂ ಬಂಗಾರ, … Read more